ಅಕ್ರಮ ಮದ್ಯ ಮಾರಾಟ; ೬೭ ಪ್ರಕರಣ ದಾಖಲು

ದಾವಣಗೆರೆ,ಜೂ.4; ಕೊರೊನಾ ವೈರಸ್ ಎರಡನೇ ಅಲೆಯ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್ ಸಂದರ್ಭಲ್ಲಿ ಅನುಮತಿಸಿದ ಅವಧಿಯನ್ನು ಹೊರತುಪಡಿಸಿ, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಯ ಒಟ್ಟು ೬೭ ಪ್ರಕರಣಗಳನ್ನು ದಾಖಲಿಸಿ, ೪.೬೩ ಲಕ್ಷ ರೂ. ಮೌಲ್ಯದ ಮದ್ಯ, ಬಿಯರ್ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ.      ರಾಜ್ಯ ಸರ್ಕಾರ ಹಾಗೂ ಅಬಕಾರಿ ಆಯುಕ್ತರ ನಿರ್ದೇಶನದ ಮೆರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾದ್ಯಂತ ಜೂ. ೦೭ ರವರೆಗೆ ಎಲ್ಲ ಬಗೆಯ ಮದ್ಯ ಮಾರಾಟ ನಿಷೇಧಿಸಲಾಗಿದೆ.  ಈ ನಡುವೆ ಇತ್ತೀಚೆಗೆ ಮೇ.೩೧ ಹಾಗೂ ಜೂನ್ ೩ ರಂದು ಬೆಳಿಗ್ಗೆ ೦೬ ಗಂಟೆಯಿಂದ ಮಧ್ಯಾಹ್ನ ೧೨ ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.   ಅನುಮತಿಸಿದ ಅವಧಿ ಹೊರತುಪಡಿಸಿ, ಉಳಿದಂತ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಬಗೆಯ ಮದ್ಯದ ಮಾರಾಟವನ್ನು ನಿಷೇಧಿಸಿ, ನಿಷೇಧಿತ ಅವಧಿಯಲ್ಲಿ ಎಲ್ಲಾ ವಿಧದ ಮದ್ಯದ ಸನ್ನದುಗಳನ್ನು ಇಲಾಖೆಯಿಂದ ಸೀಲ್ ಮಾಡಿ ಬಂದ್ ಮಾಡಲಾಗಿರುತ್ತದೆ.       ಮದ್ಯ ಮಾರಾಟದ ನಿಷೇಧಿತ ಅವಧಿಯ ಜೊತೆಗೆ ಲಾಕ್‌ಡೌನ್ ಅವಧಿ ಏ.೨೩ ರಿಂದ ಮೇ ೩೧ ರವರೆಗಿನ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಲು ಜಿಲ್ಲೆಯಲ್ಲಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾವಣಗೆರೆ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗಿತ್ತು.    ಕಳೆದ ಏ.೨೩ ರಿಂದ ಮೇ.೩೧ ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೪೭ ದಾಳಿ ಸಂಘಟಿಸಿದ್ದ್ದು, ೧೯ ಘೋರ ಹಾಗೂ ೧೫(ಎ) ಅಡಿಯಲ್ಲಿ ೪೮ ಸೇರಿದಂತೆ ಒಟ್ಟು ೬೭ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ೩೮೫.೯೩೦ ಲೀ ಮದ್ಯ, ೧೧೩.೯೩೦ ಲೀ ಬಿಯರ್, ೪ ವಾಹನ ಸೇರಿದಂತೆ ಒಟ್ಟು ೪,೬೩,೪೮೭ ರೂ. ಮೌಲ್ಯದ ಅಬಕಾರಿ ಪದಾರ್ಥ ಮತ್ತು ವಸ್ತುಗಳನ್ನು ಜಪ್ತು ಮಾಡಲಾಗಿದೆ.       ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮದ್ಯದ ಅಲಭ್ಯತೆಯಿಂದಾಗಿ ಪಾನೀಕರು ತಮ್ಮ ವ್ಯಸನದ ಹಿನ್ನೆಲೆಯಲ್ಲಿ ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ, ಸಾರಾಯಿ, ಸ್ಯಾನಿಟೈಸರ್, ವಾರ್ನಿಶ್, ಸರ್ಜಿಕಲ್ ಸ್ಪಿರಿಟ್ ಇತ್ಯಾದಿಗಳನ್ನು ಸೇವನೆ ಮಾಡಬಾರದು. ಇದರ ಸೇವನೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರೊಂದಿಗೆ ಪ್ರಾಣಹಾನಿಯಾಗುವ ಸಂಭವವಿರುತ್ತದೆ. ಇಂತಹ ಪ್ರಕರಣಗಳು ಕಂಡುಬAದಲ್ಲಿ ಸಾರ್ವಜನಿಕರು ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಾವು-ನೋವುಗಳನ್ನು ತಡೆಗಟ್ಟಲು ಸಹಕಾರ ನೀಡಬೇಕು.ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ದಾವಣಗೆರೆ ವಲಯ ನಂ.೧ ರ ಅಬಕಾರಿ ನಿರೀಕ್ಷಕರಾದ ವಿನೋದ್ ಕಳಸಪ್ಪ ಗೋಳ್ ೭೭೯೫೩೨೩೨೩೦, ದಾವಣಗೆರೆ ವಲಯ ನಂ ೨ ರ ಅಬಕಾರಿ ನಿರೀಕ್ಷಕ ಶಂಕರಪ್ಪ ೯೪೪೮೫೩೨೫೫೧, ಹರಿಹರ ವಲಯದ ಅಬಕಾರಿ ನಿರೀಕ್ಷಕ ಶೀಲಾ.ಜೆ.ಕೆ ೮೮೬೧೪೧೧೩೩೯, ಹೊನ್ನಾಳಿ ವಲಯದ ಅಬಕಾರಿ ನಿರೀಕ್ಷಕ ಎಸ್.ಆರ್.ಮುರುಡೇಶ್ ೯೪೪೯೬೮೬೨೨೨, ಚನ್ನಗಿರಿ ವಲಯದ ಅಬಕಾರಿ ನಿರೀಕ್ಷಕ ನೌಷದ್ ಅಹಮ್ಮದ್ ಖಾನ್ ೯೩೮೦೮೯೧೯೧೫, ಅಬಕಾರಿ ಉಪ ಆಯುಕ್ತರ ಕಚೇರಿ ಅಬಕಾರ ನಿರೀಕ್ಷಕಿ ರಶ್ಮೀ ಕೆ.ಆರ್ ೮೯೭೦೫೬೦೦೪೯, ದಾವಣಗೆರೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಎ.ನಾಗರಾಜ್ ೯೪೪೯೫೯೭೦೬೪, ಹೊನ್ನಾಳಿ ಉಪವಿಭಾಗ ಅಬಕಾರಿ ಉಪ ನಿರೀಕ್ಷಕ ವೀರೇಶ್ ಬ. ಚಿಕ್ಕರೆಡ್ಡಿ ೯೪೪೯೫೯೭೦೬೬, ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್.ಬಿ ೯೪೪೯೫೯೭೦೬೧ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.