
ದಾವಣಗೆರೆ ಏ. 11; ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ರೂ 9,96,542 ಮೌಲ್ಯದ ಅಕ್ರಮ ಮಧ್ಯ, ಬಿಯರ್ ಹಾಗೂ ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆಯಿಂದ ಜಪ್ತು ಪಡಿಸಿಕೊಂಡು ಈ ಸಂಬAಧ ಒಟ್ಟಾರೆ 101 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾಳಿಯನ್ನು ನಡೆಸಲಾಗಿದೆ.ಮಾರ್ಚ್ 29 ರಿಂದ ಏಪ್ರಿಲ್ 09 ರವರೆಗೆ 556.335 ಲೀ. ಮದ್ಯ, 70.870 .ಲೀ. ಬಿಯರ್ ಹಾಗೂ 20 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ರೂ. 9,96,542 ಮೊತ್ತದ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.ಮದ್ಯ ಸಾಗಾಣಿಕೆ/ದಾಸ್ತಾನು ಕುರಿತಂತೆ 27 ಘೋರ ಮೊಕದ್ದಮೆಗಳು, ಸಾರ್ವಜನಿಕ ಸ್ಥಳಗಳಲ್ಲಿ ವiದ್ಯ ಮಾರಾಟ ಕುರಿತು 55 ಮೊಕದ್ದಮೆಗಳು ಹಾಗೂ ಮದ್ಯದಂಗಡಿಗಳಲ್ಲಿನ ಸನ್ನದು ಷರತ್ತುಗಳ ಉಲ್ಲಂಘನೆಗಾಗಿ 19 ಬಿ.ಎಲ್.ಸಿ ಮೊಕದ್ದಮೆಗಳನ್ನು ಒಳಗೊಂಡAತೆ ಒಟ್ಟಾರೆಯಾಗಿ 101 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.