ಅಕ್ರಮ ಮದ್ಯ ತಡೆಯಲು ಹೋದ ಅಧಿಕಾರಿಗಳ ಮೇಲೆ ಕುಡುಕರ ದಾಳಿ

ಬೀದರ:ಮೇ.21: ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಅಬಕಾರಿ ಪೊಲೀಸರ ಮೇಲೆಯೇ ಕುಡುಕರು ದಾಳಿ ಮಾಡಿರುವ ಘಟನೆ ಬೀದರ್​ನ ಪ್ರತಾಪ್​ ನಗರದಲ್ಲಿ ನಡೆದಿದೆ.

ಅಬಕಾರಿ ಪೊಲೀಸರ ಲಾಠಿಯಿಂದಲ್ಲೇ ಪೊಲೀಸರ ಮೇಲ್ಲೆ ಹಲ್ಲೆ ನಡೆದಿದ್ದಲ್ಲದೆ, ಸರ್ಕಾರಿ ವಾಹನವನ್ನು ಜಖಂಗೊಳಿಸಿದ್ದಾರೆ. ಕೆಲ ಕಿಡಿಗೇಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ ಮಹಿಳಾ ಅಧಿಕಾರಿ ಸ್ಥಳಕ್ಕೆ ಹೋದಾಗ ಘಟನೆ ನಡೆದಿದೆ.

ಕುಡಿದ ನಶೆಯಲ್ಲಿದ್ದ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಟಿ ತೆಗೆದುಕೊಂಡು ಸಿಬ್ಬಂದಿಗೆ ಧಳಿಸಿದ್ದಾರೆ. ಸರ್ಕಾರಿ ಕಾರಿನ ಮೇಲೆ ಕಲ್ಲು ಎತ್ತಿಹಾಕುವ ಮೂಲಕ ಜಖಂ ಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಮಯಕ್ಕೆ ಸರಿಯಾಗಿ ಅಬಕಾರಿ ಇಲಾಖೆಯ ಡಿವೈಎಸ್ಪಿ ಆನಂದ ಸೇರಿದಂತೆ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗಿದ್ದರಿಂದ ದೊಡ್ಡ ದುರಂತ ತಪ್ಪಿದೆ.