ಅಕ್ರಮ ಮದ್ಯ ಜಪ್ತಿ

ವಿಜಯಪುರ: ಮಾ.27:ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ತಡೆದು ಮದ್ಯ ವಶ ಪಡೆಸಿಕೊಂಡು ಹಾಗೂ ಲಾರಿ ಚಾಲಕನ್ನು ಅಬಕಾರಿ ಪೆÇಲೀಸರು ಜಪ್ತಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೆÇೀಸ್ಟ್‍ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ತುಮಕೂರು ನಿವಾಸಿ ಫೈರೋಜ್ ಸೈಯದ್ ಅಬ್ದುಲ್ ರಹಮಾನ್ ಬಂಧಿತ ಆರೋಪಿಯಾಗಿದ್ದಾನೆ. ಅಕ್ರಮವಾಗಿ ಮದ್ಯ ಸಾಗಾಟ ಮಾಡುವಾಗ ಚೆಕ್ ಪೆÇೀಸ್ಟ್‍ನಲ್ಲಿ ತಪಾಸಣೆ ವೇಳೆ 47.38 ಲಕ್ಷ ಮೌಲ್ಯದ 9108 ಲೀಟರ್ ಬಿಯರ್ ಹಾಗೂ 10 ಲಕ್ಷ ಮೌಲ್ಯದ ಲಾರಿ ಸೇರಿ 57, 38, 851 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಂಡಿ ವಲಯ ಅಬಕಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸೀರೆ ವಶಕ್ಕೆ: ಅಕ್ರಮವಾಗಿ ಸೀರೆ ಇತರೆ ಬಟ್ಟೆ ಸಂಗ್ರಹಿಸಿ ಇಟ್ಟಿದ್ದ ಕಾಂಪ್ಲೆಕ್ಸ್ ಮೇಲೆ ಪೆÇಲೀಸರು ದಾಳಿ ನಡೆಸಿರುವ ಘಟನೆವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹಳೇ ತಹಶೀಲ್ದಾರ ಕಚೇರಿಯ ಬಳಿ ನಡೆದಿದೆ.
ಮೋಹನ ಹಂಚಾಟೆ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ, ಕಾಂಪ್ಲೆಕ್ಸ್‍ನಲ್ಲಿ ಅಕ್ರಮವಾಗಿ ಸೀರೆ, ಶರ್ಟ್‍ಗಳನ್ನು ಸಂಗ್ರಹಿಸಿ ಇಟ್ಟಿದ್ದರು.
ಖಚಿತ ಮಾಹಿತಿ ಆಧರಿಸಿ ಪೆÇಲೀಸರು ದಾಳಿ ನಡೆಸಿದ್ದಾರೆ.
ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಕ್ರಮ ಮದ್ಯ ವಶ: ಅಕ್ರಮವಾಗಿ ಮದ್ಯ ಸಂಗ್ರಹಿ ಸಿದ ಮನೆಯ ಮೇಲೆ ಅಬಕಾರಿ ಪೆÇಲೀಸ ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಡಲಸಂಗ ಗ್ರಾಮದಲ್ಲಿ ನಡೆದಿದೆ.
ಅಣ್ಣಾರಾಯ್ ಶ್ರೀಶೈಲ್ ಪೂಜಾರಿ ಬಂಧಿತ ಆರೋಪಿ ಯಾಗಿದ್ದಾನೆ. ಬಂಧಿತ ಆರೋಪಿಯಿಂದ 14 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.ಇಂಡಿ ಅಬಕಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಾವಿಯಲ್ಲಿ ಬಿದ್ದವನ ರಕ್ಷಣೆ: 80 ಅಡಿ ಬಾವಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ಬು ರಕ್ಷಣೆ ಮಾಡಲಾಗಿ ರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.ಅಸ್ಲಂ ಮೌಲಾಸಾಹೇಬ್ ನದಾಫ್‍ನ್ನು ರಕ್ಷಣೆ ಮಾಡಲಾಗಿದೆ.ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದನು, ಇದನ್ನು ಗಮನಿಸಿ ಸಾರ್ವಜನಿಕರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ80 ಅಡಿ ಬಾವಿಯಲ್ಲಿ ಬಿದ್ದಿದ್ದ ಅಸ್ಲಂನ್ನು ರಕ್ಷಣೆ ಮಾಡಿದ್ದಾರೆ.ಸಿಂದಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.