ಅಕ್ರಮ ಮದ್ಯ, ಕಳ್ಳಭಟ್ಟಿ ಸೇಂದಿ ಮಾರಾಟ ತಡೆಯಲು ಮನವಿ

ಸೇಡಂ,ಎ,03: ತಾಲೂಕಿನ ಕುಕ್ಕುಂದಾ ಗ್ರಾಮದಲ್ಲಿ ಲೈಸೆನ್ಸ್ ಇಲ್ಲದೆ ಕಳ್ಳಭಟ್ಟಿ ಸೇಂದಿ ಮದ್ಯವು ಕಿರಾಣಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದು ಇದರಿಂದ ಗ್ರಾಮದಲ್ಲಿ ಹಲವರ ಜೀವ ಹೋಗಿದ್ದು ಊರಿನ ಹಿತದೃಷ್ಟಿಯಿಂದ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಾಲೂಕ ಅಬಕಾರಿ ಇಲಾಖೆಯ ನಿರೀಕ್ಷಕರಾದ ರವಿಕುಮಾರ್ ಎಸ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಲೈಸೆನ್ಸ್ ಇಲ್ಲದೆ ಮಾರಾಟಗಾರರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರವಿಕುಮಾರ್ ಎಸ್ ಪಾಟೀಲ್ ಅಬಕಾರಿ ನಿರೀಕ್ಷಕರು ಸೇಡಂ.