ಅಕ್ರಮ ಮದ್ಯಮಾರಾಟ ಹಾಗೂ ಮುಖ್ಯ ರಸ್ತೆಗಳಲ್ಲಿ ಗೋಮಾಂಸ ವಿತರಣೆಗೆ ಕಡಿವಾಣ ಹಾಕುವಂತೆ ಖಡಕ್ ಎಚ್ಚರಿಕೆ

ಕಾಳಗಿ.ಜು.29 : ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಹಾಗೂ ಗೋವುಗಳನ್ನು ಕಳ್ಳಸಾಗಣಿಕೆ ಮಾಡಿ ಎಲ್ಲೆಂದರಲ್ಲಿ ಮಾರಾಟ ಮಾಡುತ್ತಿರುವ ಗೋಮಾಂಸದಂಗಡಿಗಳನ್ನು ಕುಡಲೇ ತೆರವುಗೋಳಿಸುವಂತೆ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು, ಖಡಕ್ ಎಚ್ಚರಿಕೆ ನೀಡಿದರು.

ಕಾಳಗಿ ತಾಲೂಕಿನ ಸಮಗ್ರ ಸಮಸ್ಯಗಳನ್ನಾಲಿಸಿ, ಸೂಕ್ತಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಳಗಿ ಪಟ್ಟಣಕ್ಕೆ ಗುರುವಾರ ಆಗಮಿಸಿರುವ ಜಿಲ್ಲಾಧಿಕಾರಿಗಳು, ಇಲ್ಲಿಯ ತಹಸೀಲ್ ಕಾರ್ಯಾಲಯದಲ್ಲಿ ಸಾರ್ವಜನಿಕರಿಂದ ನೂರಾರು ಅಹವಾಲುಗಳನ್ನು ಸ್ವೀಕರಿಸಿ ಸಮಚಿತ್ತದಿಂದ ಆಲಿಸಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಕಾಳಗಿ ತಾಲೂಕಿನಲ್ಲಿರು ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ನೆನೆಗುದಿಗೆ ಬಿದ್ದಿರುವ ನೂರಾರು ಕಾಮಗಾರಿಗಳು ಸೇರಿದಂತೆ ಇಲ್ಲಿಯ ಅಧಿಕಾರಿಗಳು ಯಾವ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದನ್ನು ಪರಿಶಿಲಿಸಿದರು.

ರೈತರ ಪಾಹಣಿ ತಿದ್ದುಪಡಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾಸುರಕ್ಷಾ, ಮನಸ್ವಿನಿ, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಫಲಾನುಭವಿಗಳ ಸಮಸ್ಯೆಗಳು ಸೇರಿಸಿ ಹತ್ತು ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ನೂರಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವಾರು ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಗಳ ಸುರಿಮಳೆಯನ್ನೆ ಗೈದರು.

ಮನವಿಪತ್ರಗಳ ಮಹಾಪುರವನ್ನೆ ಹೊತ್ತುಕೊಂಡ ಜಿಲ್ಲಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಿಶೇಷ ಸಭೇಯನ್ನು ತೆಗೆದುಕೊಂಡ ಅವರು, ಎಲ್ಲಾ ಅಹವಾಲುಗಳನ್ನು ಮುಂದಿಟ್ಟು ಇ??ಗಳಿಗೆ ತಕ್ಕ ಪರಿಹಾರಕಂಡುಕೊಳ್ಳಬೇಕು. ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡುವುದಾಗಲಿ, ಸುಳ್ಳು ಮಾಹಿತಿ ನೀಡಿವುದಾಗಲಿ, ಸೂಲಿಗೆ ಮಾಡುವುದಾಗಲಿ ಕಂಡು ಬಂದಿದ್ದೆಯಾದರೆ ತಮ್ಮ ಮೇಲೆ ಕಾನೂನು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಲ್ಲಾ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಇಂದು ದೂರುಗಳನ್ನು ನೀಡಿರುವ ಸಾರ್ವಜನಿಕರಿಗೆ ಬರುವ ಆರು ತಿಂಗಳ ಕಾಲ ಒಳಗಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು.

ಅಗಷ್ಟ್ ತಿಂಗಳ 6 ಮತ್ತು 7ನೇ ತಾರಿಕಿಗೆ ರೈತರ ಪಾಣಿ ಸಮಸ್ಯೆಗಳನ್ನು ಹೊಗಲಾಡಿಸುವ ಪ್ರಕ್ರೀಯೆ ಪೂರ್ಣಗೊಳ್ಳಬೇಕು ಎಂದರು.

ಕಾಳಗಿ ತಾಲೂಕು ಗ್ರೇಡ್-2 ತಹಸೀಲ್ದಾರ ನಾಗನಾಥ ತರಗೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಎ.ಕುಲ್ಕರ್ಣಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ, ಪಶುವೈಧ್ಯಾಧಿಕಾರಿ ಅಣ್ಣರಾವ ಪಾಟೀಲ, ಮಂಗಲಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿ ಡಾ.ದೀಪಕ ರಾಠೋಡ, ಪಿಆರ್‍ಇ ಎಇಇ ವಿರೇಂದ್ರಕುಮಾರ, ಪಿಡಬ್ಲ್ಯೂಡಿ ಎಇಇ ಸಿದ್ರಾಮ ದಂಡಗುಲಕರ್, ಸಿಡಿಪಿಓ ರಾಜಕುಮಾರ ರಾಠೋಡ, ಕೃಷಿ ಅಧಿಕಾರಿ ಸರೋಜಾ ಕಲಬುರಗಿ, ಸಿಪಿಐ ವಿನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.