ಅಕ್ರಮ ಬಾಂಗ್ಲಾ ವಲಸಿಗರ ತನಿಖೆ ಚುರುಕು

ಬೆಂಗಳೂರು,ಆ.೧೧-ಇತ್ತೀಚೆಗೆ ನಗರದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳು ದಾಳಿ ನಡೆಸಿ ೨೪ ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ವಿಚಾರಣೆ ಕೈಗೊಂಡಿದ್ದಾರೆ.ಬೆಳ್ಳಂದೂರಿನಲ್ಲಿ ಎನ್‌ಐಎ ದ ಅಧಿಕಾರಿಗಳು ದಾಳಿ ನಡೆಸಿ ೨೪ ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಹಚ್ಚಿ ವಿಚಾರಣೆ ನಡೆಸಲಾಗಿದೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು.
ಬಾಂಗ್ಲಾ ಪ್ರಜೆಗಳು ದೇಶದಲ್ಲಿ ೨೦೧೧ರಿಂದ ಅಕ್ರಮವಾಗಿ ನೆಲೆಸಿರುವ ಮಾಹಿತಿಯಿದೆ. ಇವರೆಲ್ಲ ಬ್ರೋಕರ್ ಒಬ್ಬನಿಗೆ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಮಾಹಿತಿಯಿದೆ. ತಲಾ ೨೦ ಸಾವಿರ ರೂ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಗ್ಲಾದೇಶಿಯರು ಭಾರತದ ಆಧಾರ್ ಸೇರಿದಂತೆ ಹಲವು ಐಡಿ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್‌ಐಎ ಅಧಿಕಾರಿಗಳ ದೂರಿನ ಅನ್ವಯ ಫಾರಿನರ್ ಆಕ್ಟ್, ಪಾಸ್‌ಪೋರ್ಟ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ.
ವಿಚಾರಣೆ ವೇಳೆ ಶಂಕಿತ ಬಾಂಗ್ಲಾ ಪ್ರಜೆಯೊಬ್ಬ ೨೦ ಸಾವಿರ ನೀಡಿದರೆ ದಾಖಲೆಯಿಲ್ಲದೆ ಭಾರತಕ್ಕೆ ಬರಬಹುದು ಎಂದಿದ್ದಾನೆ. ಲಕ್ನೋದಲ್ಲಿ ಖಲೀಲ್ ಚಪ್ರಾಸಿ ಎಂಬ ಶಂಕಿತನನ್ನು ಎನ್‌ಐಎ ಬಂಧಿಸಿತ್ತು.ವಿಚಾರಣೆ ವೇಳೆ ಆತ ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ೨೦೧೧ರಿಂದ ಹಲವರು ಭಾರತಕ್ಕೆ ಬಾಂಗ್ಲಾದಿಂದ ಬಂದಿದ್ದಾರೆಂದು ಖಲೀಲ್ ಹೇಳಿದ್ದಾನೆ. ಅದನ್ನು ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.