ಅಕ್ರಮ ಪೈಪ್ ಲೈನ್-ಅಧಿಕಾರಿಗಳು ದಾಳಿ

ಕೋಲಾರ,ಜ.೭-ಅಕ್ರಮವಾಗಿ ಕೆ.ಸಿ.ವ್ಯಾಲಿ ನೀರು ಕದಿಯುತ್ತಿದ್ದ ಮೇಲೆ ಸಣ್ಣ ನೀರಾವರಿ ಅಧಿಕಾರಿಗಳು ದಾಳಿ ನಡೆಸಿ, ಪೈಪ್, ಕೇಬಲ್, ಮೋಟರ್‌ಗಳನ್ನ ವಶಪಡಿಸಿಕೊಂಡಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಮಂಜುನಾಥ್ ಎಂಬುವರು ಅಕ್ರಮವಾಗಿ ಪಂಪು ಮೋಟಾರ್ ಅಳವಡಿಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಕೆಸಿ ವ್ಯಾಲಿ ಎಇಇ ಕೃಷ್ಣ ಹಾಗೂ ಸಣ್ಣ ನೀರಾವರಿ ಇಲಾಖೆ ಅಬಿಯಂತರ ಸುರೇಶ್ ಕುಮಾರ್ ಹಾಗು ಪೊಲೀಸರು ದಾಳಿ ನಡೆಸಿದರು.
ಇನ್ನು ರಾತ್ರಿ ವೇಳೆ ಬೃಹತ್ ಕೃಷಿ ಹೊಂಡಕ್ಕೆ ನೀರು ತುಂಬಿಸಿಕೊಂಡು ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದು, ನೀರು ಕದಿಯುತ್ತಿರುವುದನ್ನ ಪ್ರಶ್ನಿಸಿದ ಗ್ರಾಮಸ್ಥರಿಗೆ ಅವಾಜ್ ಹಾಕುವ ಮೂಲಕ ಬೆದರಿಕೆ ಹಾಕುತ್ತಿದ್ದಾನೆಂದು ಗ್ರಾಮಸ್ಥರು ನೀಡಿದ ದೂರಿನನ್ವಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನು ಕೆ.ಸಿ.ವ್ಯಾಲಿನೀರು ಕದಿಯುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಕೆಸಿ ವ್ಯಾಲಿ ನೀರನ್ನು ಬಳಸಿಕೊಂಡು, ವ್ಯವಸಾಯಕ್ಕೆ ಬಳಸಿಕೊಳ್ಳುತ್ತಿರುವ ಜಮೀನಿನಲ್ಲಿ ಯಾವುದೇ ಸರ್ಕಾರ ಯೋಜನೆಗಳು ಸಿಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.