ಅಕ್ರಮ ಪಡಿತರ ದಂಧೆಗೆ ಕಡಿವಾಣ ಹಾಕಬೇಕು

ಸಮಾಜದ ಪ್ರತಿಷ್ಠೆಯ ಹೋರಾಟ ನಿಲ್ಲುವುದಿಲ್ಲ – ರವಿಕುಮಾರ
ಮಾನ್ವಿ:ಡಿ.೦೬ ಅಕ್ರಮವಾಗಿ ಪಡಿತರ ಅಕ್ಕಿಗಳನ್ನು ಕಾಳಸಂತೆಗೆ ಮಾರಾಟ ಮಾಡುತ್ತಿರುವ ದಂಧೆಕೋರರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಸಮಾಜದ ಪ್ರತಿಷ್ಠೆ ಯಾಗಿದೆ ಎಂದು ಪಿ.ರವಿಕುಮಾರ ವಕೀಲರು ಕೋನಾಪುರ ಪೇಟೆ ಹೇಳಿದರು.
ಪಟ್ಟಣದ ಬಸವ ವೃತ್ತದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಅಕ್ರಮ ಪಡಿತರ ಅಕ್ಕಿಯನ್ನು ಮಾರಾಟಮಾಡುವ ಆಲ್ದಾಳ ವೀರಭದ್ರಪ್ಪ ಗಡಿಪಾರು ಮಾಡಬೇಕು ಇತನ ಮತ್ತು ಕುಟುಂಬಸ್ಥರ ಬೇನಾಮಿ ಆಸ್ತಿ ಮುಟ್ಟುಗೋಲು ಹಾಕಬೇಕು ಹಾಗೂ ಮಾನ್ವಿ ಮತ್ತು ಸಿರವಾರ ತಾಲೂಕಿನ ಪತ್ರಕರ್ತರ, ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ಕೈ ಬೀಡಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೃಹತ್ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ದೇಶದ ತುಂಬೆಲ್ಲ ಭ್ರಷ್ಟಾ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೊಂದಾಣಿಕೆಯಿಂದ ಪ್ರಜಾಪ್ರಭುತ್ವದ ಆಶಯಗಳು ಅಳಿವಿನಂಚಿನಲ್ಲಿವೆ ಲಂಚ ಅವತಾರ ವಿಲ್ಲದೆ ಒಂದೇ ಒಂದು ಇಲಾಖೆಯು ಇಲ್ಲ ನೆಲ-ಜಲಗಳ ಕಾರ್ಪೊರೇಟರ್ ಸಾರ್ವಜನಿಕ ಉದ್ಯಮಗಳು ಕಾರ್ಪೊರೇಟ್ ಗಳ ಕೈವಶ ವಾಗುತ್ತಿವೆ ಆಯಾ ಜಿಲ್ಲೆಗಳಲ್ಲಿ ಹೇರಳವಾಗಿ ಸಿಗುವಂತ ನೈಸರ್ಗಿಕ ಸಂಪನ್ಮೂಲಗಳಾದ ಮರಳು ಕಲ್ಲು ಖನಿಜ ಸಂಪತ್ತುಗಳನ್ನು ನುಂಗಿ ನೀರು ಕುಡಿದ ಕಾಳಸಂತೆ ದರೋಡೆಕೋರರು ಕಡುಬಡವರ ಅಪೌಷ್ಟಿಕ ಮಕ್ಕಳ ಬಾಣಸಿಗರ ಅಂಗನವಾಡಿಯ ಅಕ್ಷರ ದಾಸೋಹದ ಕ್ಷೀರಭಾಗ್ಯ ಯೋಜನೆ ಮೊಟ್ಟೆ ಯೋಜನೆಗಳನ್ನು ತಮ್ಮ ಹೆಂಡರ ಸಂಬಂಧಿಕರ ಹೆಸರಿನಲ್ಲಿ ಏಜೆನ್ಸಿ ಪಡೆದು ಬಡವರ ಹಸಿದ ಹೊಟ್ಟೆಯ ಮೇಲೆ ಕನ್ನಹಾಕುವಂತಹವರನ್ನು ಹದ್ದುಬಸ್ತಿನಲ್ಲಿಡಬೇಕು ಆದ ಪೊಲೀಸ್ ಇಲಾಖೆಯು ಅಕ್ರಮ ದಂಧೆಕೋರರ ವಿರುದ್ಧ ಹೋರಾಟ ಮಾಡುವ ಹೋರಾಟಗಾರ ಮತ್ತು ಪತ್ರಕರ್ತ ಸುಳ್ಳು ಕೇಸುಗಳನ್ನು ದಾಖಲಿಸಿ ಅಕ್ರಮ ದಂಧೆಕೋರ ಆಲ್ದಾಳ ವೀರಭದ್ರಪ್ಪ ಹಾಗೂ ಅವನ ಕುಟುಂಬದ ಕಾನೂನುಬಾಹಿರ ಕೃತ್ಯಗಳಿಗೆ ಬಹಿರಂಗ ಬೆಂಬಲ ನೀಡುತ್ತಿರುವುದು ಕಂಡುಬಂದಿದೆ, ಚಿಕಲ್ಪರ್ವಿ ಮರಳು ಸ್ಟಾಕ್ ಯಾರ್ಡ ನಿಂದ ಅಕ್ರಮವಾಗಿ ರವಾನೆ ಆಗುತ್ತಿರುವ ವೀರಭದ್ರಪ್ಪ ಆಲ್ದಾಳ ಒಡೆತನದ ಮನೆಹಾಳು ದಂದೆಗೆ ಗ್ರಾಮ ಲೆಕ್ಕಾಧಿಕಾರಿ ಸಾಹೇಬ ಪಾಟೇಲ್ ಮೇಲೆ ಟಿಪ್ಪರ್ ಹಾರಿಸಿದರು ಸಾಯಿಸಿದ ಸುದ್ದಿ ರಾಜ್ಯಮಟ್ಟದಲ್ಲಿ ಸುದ್ದಿಯಾದರೂ ಸೈಲೆಂಟಾಗಿ ವ್ಯವಹಾರ ಕುದುರೆಸಿರುವ ಆಲ್ದಾಳ ನನ್ನ ಮೇಲೆ ಹತ್ತಾರು ಪ್ರಕಾರ ದಾಖಲಾಗಿದ್ದರೂ ಸಹ ಒಂದೇ ಒಂದು ಪ್ರಕರಣಕ್ಕೆ ಚಾರ್ಜ್ ಸೀಟ್ ಹಾಕದೆ ಬಿ ರಿಪೋಟ್ ಆಗುತ್ತದೆ ಎಂದರೆ ನಾವು ಯಾವ ಕಾನೂನಿನ ನೆಲದಲ್ಲಿ ಜೀವಿಸುತ್ತಿದ್ದೇವೆ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ಮಾನ್ವಿ ಸಿರವಾರ ತಾಲೂಕಿನ ಹೋರಾಟಗಾರರ ಮತ್ತು ಪತ್ರಕರ್ತರ ಮೇಲೆ ಹಾಕಿರುವ ಸುಳ್ಳು ಡಕಾಯಿತ ಕೇಸ್ ಹಿಂಪಡೆಯಬೇಕು, ೨೦೧೪-೧೫ ರ ಹಳೆ ದರ ಪಟ್ಟಿಯನ್ನು ಮುಂದುವರೆಸಿ ಸರ್ಕಾರಕ್ಕೆ ನಷ್ಟ ಮಾಡಿರುವ ಕ್ರಿಮಿನಲ್ ಆಲ್ದಾಳ ವೀರಭದ್ರಪ್ಪ ನನ್ನ ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು, ಆಲ್ದಾಳ ವೀರಭದ್ರಪ್ಪ ಮತ್ತು ಆತನ ಕುಟುಂಬಸ್ಥರು ಅಕ್ರಮ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಜಿಲ್ಲೆಯಲ್ಲಿರುವ ೧೨ ಅಂತರಾಜ್ಯಮಟ್ಟದ ಅಕ್ರಮ ಅಕ್ಕಿದಂಧೆಕೋರರು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ಹೋರಾಟದಲ್ಲಿ ಹಳ್ಳಿಗಳಿಂದ ನೂರಾರು ಜನರು, ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಂಬಣ್ಣ ಅರೋಲಿಕರ್, ಡಿ.ಎಚ್ ಪೂಜಾರಿ, ಅಶೋಕ ನೀಲಗಲ್, ಯಲ್ಲಪ್ಪ ಬಾದರದಿನ್ನಿ, ಬಸವರಾಜ್ ನಕ್ಕುಂದಿ, ಅಬ್ರಾಹಂ ಹೊನ್ನುಟಗಿ, ವಿನಯ, ಮಾರೇಶ ಬಂಡಾರಿ, ರಾಘವೇಂದ್ರ ಬೋರಡ್ಡಿ, ಸಂಪತ್ ರಾಜ್ ಇತರರು ಇದ್ದರು.