ಅಕ್ರಮ ಪಡಿತರ ಅಕ್ಕಿ ಸಾಗಾಟ – ಪೊಲೀಸರಿಂದ  ಜಪ್ತಿ ಐವರ ಬಂಧನ

.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 22 :- ಸಾರ್ವಜನಿಕರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ 142ಕ್ವಿoಟಾಲ್ ಅಕ್ಕಿಯನ್ನು ಜಪ್ತಿಮಾಡಿರುವ ಘಟನೆ ಶನಿವಾರ ಜರುಗಿದೆ.
ಲಾರಿಯೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪಿಎಸ್ಐ ಕೂಡ್ಲಿಗಿ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಕೊಟ್ಟೂರು ಸಿಪಿಐ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಹೊಸಹಳ್ಳಿ ಹೊರವಲಯದ ಗಾಣಿಗರ ಸಮುದಾಯದ ಭವನದ ಹತ್ತಿರದ ಸಕಲಾಪುರ ಕ್ರಾಸ್ ಬಳಿ ದಾಳಿ ನಡೆಸಿ ಅಕ್ರಮ ಸಾಗಾಟದ 142.40ಕ್ವಿoಟಾಲ್ ಅಕ್ಕಿಯನ್ನು ಜಪ್ತಿ ಮಾಡಿ ಅಕ್ರಮ  ಸಾಗಾಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಆಹಾರ ನಿರೀಕ್ಷಕ ಗೀತಾಂಜನೇಯ ಪಡಿತರವನ್ನು ಪರೀಕ್ಷಿಸಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.