ಸಂಜೆವಾಣಿ ವಾರ್ತೆ
ಜಗಳೂರು.ಸೆ.೨೧: ತಾಲೂಕಿನ ದೊಣ್ಣೆಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅಕ್ರಮ ನೇಮಕಾತಿ ಖಂಡಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಉಪ ತಹಶೀಲ್ದಾರ್ ಮಂಜಾನಂದಗೆ ಮನವಿ ಸಲ್ಲಿಸಿದರು.ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ದೊಣ್ಣೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಖಾಲಿಯಾದ ಕಾರ್ಯನಿರ್ವಾಹಣಾಧಿಕಾರಿಯ ಹುದ್ದೆಗೆ ಅರ್ಹ ರನ್ನು ಪರಿಗಣಿಸದೆ ಕಾನೂನು ವಸಲಿ ಬಾಜಿನಿಂದ ಅನರ್ಹ ಹೊರ ಗಿನ ಯುವಕನನ್ನು ಅಕ್ರಮವಾಗಿ ನೇಮಕ ಮಾಡಿಕೊಂಡು ಅದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಟೆಂಡ್ ಕಮ್ ಮಾರಾ ಟಗಾರ ಎ.ಟಿ ತಿಪ್ಪೇಸ್ವಾಮಿ ಇವರಿಗೆ ವಂಚಿಸಲಾಗಿದೆ ಸಹಕಾರ ಸಂಘ ದಲ್ಲಿ 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ತಿಪ್ಪೇ ಸ್ವಾಮಿ ದಲಿತ ನೌಕರನಾಗಿದ್ದು ಈ ವ್ಯಕ್ತಿಯ ಬಡ್ತಿಯ ಮೂಲಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಹನಾಗಿರುತ್ತಾನೆ ಸೇವಾ ಅನು ಭವ ಸೇರಿದಂತೆ ತಕ್ಕ ವಿದ್ಯಾರ್ಹತೆಯನ್ನು ಈ ವ್ಯಕ್ತಿ ಹೊಂದಿರುತ್ತಾನೆ ಹೀಗಿದ್ದರೂ ಸಹ ಈತನಿಗೆ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆ ಯನ್ನು ವಂಚಿಸಲಾಗಿದೆ ಇದಕ್ಕೆ ನೇರ ಹೊಣೆಗಾರರಾದ ಆಡಳಿತ ಮಂಡಳಿ ಮತ್ತು ಉಸ್ತುವಾರಿ ಪದ ನಿಮಿತ್ತ ಅಧಿಕಾರ ಹೊಂದಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೇಲೆ ತಕ್ಷಣವೇ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅನುಸಾರ ಕ್ರಿಮಿ ನಲ್ ಮಖದಲ್ಲಿ ದಾಖಲಿಸಬೇಕೆಂದರುವಕೀಲರಾದ ಆರ್.ಓಬಳೇಶ್ ಮಾತನಾಡಿ ಅಟೆಂಡೆಂಟ್ ಕಂ ಮಾರಾಟಗಾರನಾಗಿ ಎ.ಟಿ.ತಿಪ್ಪೇಸ್ವಾಮಿ ಬಿನ್ ತಿಪ್ಪಯ್ಯ ಎಂಬ ದಲಿತ ವ್ಯಕ್ತಿ ಕಳೆದ 25 ವರ್ಷಗಳಿಂದ ಸೇವೆಗೈಯುತ್ತಿದ್ದು. ಬಡ್ತಿಗೆ ಅರ್ಹನಾಗಿದ್ದಾರೆ.ಆದರೆ ಕಾನೂನು ಬಾಹಿರವಾಗಿ ಮನೋಜ್ ಎಂಬ ಯುವಕ ಕೇವಲ ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ.ಸರ ಕಾರದ ನಿಯಮಾವಳಿ ಗಾಳಿಗೆ ತೂರಿ ನೇಮಕಮಾಡಿರುವುದು ಸರಿ ಯಲ್ಲ.ಕೂಡಲೇ ಎಸ್. ಎಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಯಡಿ ಪ್ರಕರಣ ದಾಖಲಿಸಬೇಕು.ಅಲ್ಲದೆ ಸಹಕಾರ ನಿಬಂಧಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ದಲಿತ ಮುಖಂಡ ಹಾಗೂ ಪವನ್ ಭರತ್ ಗ್ಯಾಸ್ ಮಾಲಿಕ ಓಬಣ್ಣ ಮಾತನಾಡಿ ರಾಜ್ಯ ಸರ್ಕಾರ ಆದೇಶ ಉಲ್ಲಂಘನೆ ಮಾಡಿದ ಅಧಿ ಕಾರಿಗಳು ಸ್ಥಳಿಯ ಅದ್ಯಕ್ಷ ಸರ್ವಸದಸ್ಯರುಗಳು ಈ ರೀತಿ ಕಾನೂ ನು ಬಾಹಿರವಾಗಿ ಸಭೆಯಲ್ಲಿ ಏಕಪಕ್ಷಿಯವಾಗಿ ನಿರ್ಣಯಿಸಿ ಸರ್ವಾ ಧಿಕಾರ ಧೊರಣೆ ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾ ಗಲೇ ಆಯ್ಕೆ ಮಾಡಿರುವ ಸಹಕಾರ ಬ್ಯಾಂಕ್ ಕಾರ್ಯದರ್ಶಿ ಹುದ್ದೆ ಯಿಂದ ವಜಾಗೋಳಿಸಿ ನಿಯಮಾನಸಾರ ವಾಗಿ ದಲಿತ ಸಮು ದಾಯದ ತಿಪ್ಪೇಸ್ವಾಮಿ ಎಂಬುವವರುನ್ನು ಆಯ್ಕೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.