ಅಕ್ರಮ ನೇಮಕಾತಿ; ನ್ಯಾಯಾಲಯದ ನೋಟಿಸ್

ದ್ದಾವಣಗೆರೆ. ಮೇ.೨; ವಿ.ಟಿ.ಯು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು,  ನಿವೃತ್ತ ನ್ಯಾಯಾದೀಶರಾದ ಜಸ್ಟಿಸ್ ಕೇಶವ ನಾರಾಯಣ ರವರ ಒನ್ ಮ್ಯಾನ್ ಫ್ಯಾಕ್ಟ್ ಫಯಂಡಿಂಗ್ ವರದಿಯನ್ವಯ, ಮರು ಪರಿಶೀಲನೆ ನಡೆಸಿ, ಕೊನೆಗೂ 168 ಅಧ್ಯಾಪಕರ ನೇಮಕಾತಿಯಲ್ಲಿ, 68 ಅಕ್ರಮವಾಗಿ ನೇಮಕವಾಗಿರುವವರಿಗೆ ನೋಟಿಸ್ ನೀಡಲಾಗಿತ್ತು, ಈ ಆರು ವರ್ಷಗಳ ನಂತ ಇದರಲ್ಲಿ 10 ಜನರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಅದರಲ್ಲಿ ಬಿಡಿಟಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶಿವಪ್ರಸಾದ್ ಬಿ  ಕೂಡ ಇದ್ದಾರೆ.ಈ ಮೂಲಕ ಅಂದು ನಮ್ಮ ಸತತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಯುವ ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.
ಅಕ್ರಮ ನೇಮಕವಾಗಿರುವವರನ್ನು ವಜಾ ಗೊಳಿಸಲು, 6 ವರ್ಷಗಳು ಬೇಕಾಯಿತು.ಈ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲಾ, ನೇಮಕಾತಿಯೇ ಅಕ್ರಮವೆಂದು ಸಾಬಿತಾದ ಮೇಲೆ ಸಂಪೂರ್ಣ ನೇಮಕಾತಿಯನ್ನೇ ರದ್ದು ಗೊಳಿಸಬೇಕು.ಪ್ರಸ್ತುತ ವಜಾ ಗೊಂಡವರಿಂದ ಕಳೆದ 2013 ರ ರಿಂದ 6 ವರ್ಷಗಳಿಂದ ಸಂದಾಯ ಮಾಡಿರು ವೇತನ, ಭತ್ಯೆಗಳು ಸಂಪೂರ್ಣವಾಗಿ ವಸೂಲು ಮಾಡಬೇಕು.
ಸರ್ಕಾರದ ಅನುಮತಿ ಪಡೆಯದೆ, ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ 315 ಜನ ಅಧ್ನೇಯಾಪಕೇತರರಿಗೆ ಪೂರ್ಣ ಸೇವಾ ಅವಧಿಯ ಆದೇಶ ಮಾಡಿದ್ದಾರೆ .
ಈ ಕುರಿತು ಸರ್ಕಾರ ಶೀಘ್ರವೇ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.