ಅಕ್ರಮ ನೇಮಕಾತಿ ಆದೇಶ ರದ್ದುಪಡಿಸಲು ಒತ್ತಾಯಿಸಿ ಮನವಿ

ರಾಯಚೂರು.ನ.07- ಸರ್ವೋಚ್ಛ ನ್ಯಾಯಲಯ ಆದೇಶದಂತೆ ದಿನಗೂಲಿ ನೌಕರರ ಸೇವಾ ಸಕ್ರಮಾತಿ ಹೆಸರಿನಲ್ಲಿ ಜಿಲ್ಲಾಧಿಕಾರಿಗಳ ಅಕ್ರಮ ನೇಮಕಾತಿ ಆದೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಜಿಲ್ಲಾಧಿಕಾರಿಗಳಿಗೆ ಐದನೇ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದೆ.
2017 ಎ.10 ರಂದು ಹೊರಡಿಸಿದ ದಿನಗೂಲಿ ನೌಕರರ ಕಾನೂನು ಬಾಹೀರ ಮತ್ತು ಸರ್ವೋಚ್ಛ ನ್ಯಾಯಾಲಯದ ಮೊದಲನೇಯ ಷರತ್ತನ್ನು ಉಲ್ಲಂಘಿಸಿದ ಅಕ್ರಮ ಅದೇಶವನ್ನು ಕೂಡಲೇ ರದ್ದುಪಡಿಸಿ, ನೇರ ನೇಮಕಾತಿ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಮತ್ತು ಉಳಿದ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಕೊರೊನಾ ವಾರಿಯರ್‌ಗಳಾದ ಪೌರ ಕಾರ್ಮಿಕರ ಮೇಲೆ ಹೂಡಿದ ಸುಳ್ಳು ಕ್ರಿಮಿನಲ್ ಪ್ರಕರಣ ವಾಪಸ್‌ ಪಡೆಯಬೇಕು. 3 ತಿಂಗಳ ವೇತನ ಮತ್ತು ಇಎಸ್‌ಐ ಹಣವನ್ನು ಕೂಡಲೇ ಪೌರ ಕಾರ್ಮಿಕರಿಗೆ ಖಾತೆಗೆ ಪಾವತಿಸಬೇಕು. ಪೌರ ಕಾರ್ಮಿಕರಿಗೆ ಸಮವಸ್ತ್ರ, ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಸೇರಿದಂತೆ ಇನ್ನಿತರ ಬೇಡಿಕೆ ಈಡೆರಿಸುವಂತೆ ಮನವಿ ಮಾಡ‌ಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲ, ಜಿಲ್ಲಾಧ್ಯಕ್ಷ ಉರುಕುಂದಪ್ಪ, ಉಪಾಧ್ಯಕ್ಷ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ಆರ್.ಹನುಮಂತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.