ಅಕ್ರಮ ನೇಮಕಾತಿ ಆದೇಶ ರದ್ದಿಗೆ ಒತ್ತಾಯಿಸಿ ಏಳನೇ ಮನವಿ

ರಾಯಚೂರು.ನ.೧೩- ೨೦೧೭ರ ಅವಧಿಯಲ್ಲಿ ಸರ್ವೋಚ್ಛ ನ್ಯಾಯಲಯ ಆದೇಶದಂತೆ ದಿನಗೂಲಿ ನೌಕರರ ಸೇವಾ ಸಕ್ರಮಾತಿ ಹೆಸರಿನಲ್ಲಿ ಜಿಲ್ಲಾಧಿಕಾರಿಗಳ ಅಕ್ರಮ ನೇಮಕಾತಿ ಆದೆಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಜಿಲ್ಲಾಧಿಕಾರಿಗಳಿಗೆ ಏಳನೇ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದೆ.
೨೦೧೭ರ ಎಪ್ರಿಲ್ ೧೦ ರಂದು ಹೊರಡಿಸಿದ ದಿನಗೂಲಿ ನೌಕರರ ನೌಕರರ ಕಾನೂನು ಬಾಹಿರ ಮತ್ತು ಸರ್ವೋಚ್ಛ ನ್ಯಾಯಾಲಯದ ಮೊದಲನೇಯ ಷರತ್ತನ್ನು ಉಲ್ಲಂಘಿಸಿದ ಅಕ್ರಮ ಅದೇಶವನ್ನುಕೂಡಲೇ ರದ್ದುಪಡಿಸಿ, ನೇರ ನೇಮಕಾತಿ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಮತ್ತು ಉಳಿದ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಕೊರೋನಾ ವಾರಿಯರ್‌ಗಳಾದ ಪೌರ ಕಾರ್ಮಿಕರ ಮೇಲೆ ಹೂಡಿದ ಸುಳ್ಳು ಕ್ರಿಮಿನಲ್ ಕೇಸ್ ವಾಪಸ್‌ಪಡೆಯಬೇಕು. ೩ ತಿಂಗಳ ವೇತನ ಮತ್ತು ಇಎಸ್‌ಐ ಹಣವನ್ನು ಕೂಡಲೇ ಪೌರ ಕಾರ್ಮಿಕರಿಗೆ ಖಾತೆಗೆ ಪಾವತಿಸಬೇಕು.
ಪೌರ ಕಾರ್ಮಿಕರಿಗೆ ಸಮವಸ್ತç, ಮಾಸ್ಕ್ ಗ್ಲೌಸ್, ಪಿಪಿಇಕಿಟ್ ಪೂರೈಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೆರಿಸುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.