ಅಕ್ರಮ ನಾಡ ಪಿಸ್ತೂಲು ಹೊಂದಿದ ಇಬ್ಬರ ಬಂಧನ

ಕಲಬುರಗಿ ಸೆ 11 : ಅಳಂದ ಪೆÇಲೀಸ್ ಠಾಣೆ ವ್ಯಾಪ್ತಿಯ ಖಜೂರಿ ಗ್ರಾಮದಲ್ಲಿ ಅಕ್ರಮ ನಾಡ ಪಿಸ್ತೂಲ ಹೊಂದಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಣಮಂತ ಶಿವಪ್ಪಾ ವಾರಿಕ ಮತ್ತು ಭೀಮಾಶಂಕರ ಕರಬಸಪ್ಪಾ ತಳವಾರ ಬಂಧಿತ ಆರೋಪಿಗಳಾಗಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.ಪೆÇಲೀಸ್ ಉಪಾಧೀಕ್ಷಕರಾದ. ರವೀಂದ್ರ ಶಿರೂರ ಹಾಗೂ ಆಳಂದ ವೃತ್ತ ದ ಸಿಪಿಐ ಭಾಸು ಚವ್ಹಾಣ ರವರುಗಳ ಮಾರ್ಗದರ್ಶನದಲ್ಲಿ ಆಳಂದ ಠಾಣೆ ಪಿಎಸ್ ಐ ತಿರುಮಲೇಶ ಹಾಗೂ ಸಿಬ್ಬಂದಿಯವರಾದ ಗಣಪತರಾವ ಘಂಟೆ, ಚಂದ್ರಶೇಖರ ಕಾರಭಾರಿ, ಸಿದ್ದರಾಮ ಬಿರಾದಾರ, ಬಾಬು ಸೇರಿಕಾರ, ಗುರುದೇವ, ರವೀಂದ್ರ, ಮಹಾಂತೇಶ ದೇಸಾಯಿ, ಶಿವಾಜಿ, ರತನ, ಮಹೇಶ, ಅಂಕುಶ, ಜಾವೀದ, ಅಜರೋದ್ದಿನ್ ರವರುಗಳ ವಿಶೇಷ ತಂಡ ದಾಳಿ ನಡೆಸಿತು.