ಕಲಬುರಗಿ,ಜೂ.13:ಅಕ್ರಮ ನಳದ ಸಂಪರ್ಕ ಪಡೆದು ಕುಡಿಯುವ ನೀರಿನ ಪೈಪ್‍ಲೈನ್‍ಗಳಲ್ಲಿ ಕಲುಷಿತ ನೀರು ಸೇರ್ಪಡೆಗೆ ಕಾರಣರಾದ ನಗರದ ಸಾರ್ವಜನಿಕರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಕುಸ್ಸಂಪ್ ಉಪ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಅಕ್ರಮ ನಳಗಳ ಸಂಪರ್ಕದಿಂದ ಹಲವೆಡೆ ಕುಡಿಯುವ ನೀರಿನ ಪೈಪ್‍ಲೈನ್‍ಗಳಲ್ಲಿ ಕಲುಷಿತ ನೀರು ಸೇರ್ಪಡೆಯಾಗಿರುವ ಕುರಿತು ನಗರದಲ್ಲಿ ಪ್ರಕರಣವು ವರದಿಯಾಗಿರುತ್ತದೆ. ಅಕ್ರಮವಾಗಿ ಪೈಪ್‍ಲೈನ್‍ಗಳ ಜೋಡಣೆ ಅಥವಾ ಅಕ್ರಮ ನಳ ಸಂಪರ್ಕದಿಂದ ಸಾರ್ವಜನಿಕ ನೀರು ಸರಬರಾಜು ಪೈಪ್‍ಲೈನ್‍ಗಳಲ್ಲಿ ಕಲುಷಿತ ನೀರು ಬೇರಿಕೆಯಾಗಲಿದೆ. ಎಲ್ಲಾ ಸಾರ್ವಜನಿಕರು ತುರ್ತಾಗಿ ಅಕ್ರಮ ನಳ ಸಂಪರ್ಕಗಳನ್ನು ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಿ ಸಕ್ರಮಗೊಳಿಸಿಕೊಳ್ಳಬೇಕು.
ಈ ಕುರಿತು ಸಾರ್ವಜನಿಕರು ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆ 08472-237247ಗೆ ಸಂಪರ್ಕಿಸಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.