ಅಕ್ರಮ ನಳದ ಸಂಪರ್ಕವನ್ನು ಉಚಿತವಾಗಿಸಕ್ರಮಗೊಳಿಸಲು ಮೇ 31 ರವರೆಗೆ ಅವಕಾಶ

ಕಲಬುರಗಿ,ಮಾ.27:ಕಲಬುರಗಿ ನಗರಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ನಳ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಇರುವ ನಳ ಸಂಪರ್ಕವನ್ನು ಉಚಿತವಾಗಿ ಸಕ್ರಮಗೊಳಿಸಲು ನಗರದ ಸಾರ್ವಜನಿಕರಿಗೆ 2023ರ ಮೇ 31 ರವರೆಗೆ ಅವಧಿ ನೀಡಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಸಾರ್ವಜನಿಕರು 2023ರ ಮೇ 31 ರೊಳಗಾಗಿ ನಳಗಳ ಸಂಪರ್ಕವನ್ನು ಸಕ್ರಮಗೊಳಿಸದೇ ಇದ್ದಲ್ಲಿ ಅಂತಹ ನಳಗಳಿಗೆ ಆರು ತಿಂಗಳ (ದಿನಾಂಕ: 30-11-2023ರವರೆಗೆ) ಅವಧಿಯವರೆಗೆ 5,000 ರೂ. ಗಳ ದಂಡವನ್ನು ತದನಂತರ 10,000 ರೂ.ಗಳ ದಂಡವನ್ನು ನಿಗದಿತ ನಳ ಸಂಪರ್ಕದ ಶುಲ್ಕದೊಂದಿಗೆ ವಿಧಿಸಲಾಗುತ್ತದೆ. ಈ ಅವಧಿ ಮೀರಿದ ನಂತರ ದಂಡವನ್ನು ವಿಧಿಸುವ ಜೊತೆಗೆ ನಳದ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.