ಅಕ್ರಮ ದಂಧೆಕೋರರ ಜೊತೆ ಶಾಮೀಲು: ಪೇದೆ ಅಮಾನತ್ತು

ಅಫಜಲಪುರ:ಡಿ.31: ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಸಹ ಅದನ್ನು ತಡೆಗಟ್ಟುವ ಬದಲು ಅಕ್ರಮ ಮರಳು ದಂಧೆಕೋರರ ಜೊತೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಪೆÇಲೀಸ್ ಪೇದೆ ಶಿವಶರಣ ತಳಕೇರಿಯನ್ನು ಕಲಬುರಗಿ ಎಸ್.ಪಿ ಅಡ್ಡೂರು ಶ್ರೀನಿವಾಸುಲು ಅಮಾನತ್ತು ಮಾಡಿದ್ದಾರೆ.

ಪಟ್ಟಣದ ಪೆÇೀಲಿಸ್ ಠಾಣೆಯಲ್ಲಿ ಗುಪ್ತ ಮಾಹಿತಿ (ಎಸ್ ಬಿ ಡ್ಯೂಟಿ) ಕಾರ್ಯನಿರ್ವಹಿಸುತ್ತಿದ್ದ ಶಿವಶರಣ ತಳಕೇರಿ ಅಕ್ರಮ ಮರಳುಗಾರಿಕೆ ತಡೆಗಟ್ಟುವ ಕೆಲಸ ಇವರದಾಗಿತ್ತು. ಆದರೆ ಕಳೆದ ಹಲವು ದಿನಗಳಿಂದ ಅಕ್ರಮ ಮರಳು ಸಾಗಾಟ ದಂಧೆಕೋರರೊಂದಿಗೆ ರಾತ್ರಿ ವೇಳೆ ಮರಳು ಸಾಗಾಣಿಕೆ ಮಾಡುತ್ತಿರುವ ಕುರಿತು ಸಾರ್ವಜನಿಕ ದೂರುಗಳು ಕೇಳಿ ಬಂದ ಹಿನ್ನೆಲೆ ಡಿ.29ರಂದು ಅಮಾನತ್ತು ಮಾಡಲಾಗಿದೆ.

ಶಿವಶರಣ ತಳಕೇರಿ ಕಳೆದ ನಾಲ್ಕೈದು ವರ್ಷಗಳಿಂದ ಅಫಜಲಪುರ ಪೆÇೀಲಿಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ಐದಾರು ತಿಂಗಳ ಹಿಂದೆ ಗುಪ್ತ ಮಾಹಿತಿ ಸಿಬ್ಬಂದಿಯಾಗಿ ಜವಾಬ್ದಾರಿ ತೆಗೆದುಕೊಂಡ ಮೇಲಂತೂ ಈತನ ವಿರುದ್ಧ ಹಲವು ದೂರುಗಳು ಕೇಳಿ ಬಂದಿವೆ ಎನ್ನಲಾಗಿದೆ. ಹಣಕ್ಕಾಗಿ ಬೇಡಿಕೆ, ಅವಾಚ್ಯ ಶಬ್ದಗಳ ಪದಬಳಕೆ ಹಾಗೂ ಸ್ಥಳೀಯ ಮುಖಂಡರು, ರಾಜಕೀಯ ನಾಯಕರ ಹೆಸರು ಹೇಳಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.