ಅಕ್ರಮ ದಂದ್ದೆಕೋರರ ವಿರುದ್ಧ ಕ್ರಮಕ್ಕೆ ಸದಾನಂದ ಪನ್ನೂರು ಆಗ್ರಹ

ಮಾನ್ವಿ,ಆ.೦೩- ತಾಲ್ಲೂಕಿನಾದ್ಯಂತ ಆಕ್ರಮವಾಗಿ ನೆಡೆಯುತ್ತಿರುವ ಮರಳು ಸಾಗಾಣಿಕೆ, ಮರಂ ಮಣ್ಣು ಮತ್ತು ಕಂಕರ್, ಸಾಗಾಣಿಕೆಗಳನ್ನು ತಡೆದು ಅಕ್ರಮ ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹೂಡುವಂತೆ ದಲಿತ ಸಂಘರ್ಷ ಸಮತಾವಾದ ಸಮಿತಿಯಿಂದ ತಾಲೂಕ ದಂಡಧಿಕಾರಿಗಳಿಗೆ ಮನವಿ ಸಲ್ಲಿಸಿದರು..
ನಂತರ ತಾಲೂಕ ಅಧ್ಯಕ್ಷ ಸದಾನಂದ ಪನ್ನೂರು ಮಾತಾನಾಡಿ ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಅಕ್ರಮವಾಗಿ ಮರಳು, ಮರ, ಮಣ್ಣು ಮತ್ತು ಕಂಕರ್‌ಗಳನ್ನು ಹಗಲು ರಾತ್ರಿಯೆನ್ನದೆ ಟಿಪ್ಪರ್, ಟ್ರ್ಯಾಕ್ಟರ್‌ಗಳ ಮೂಲಕ ರಾಜರೋಷವಾಗಿ ನಡೆಯುತ್ತಿದ್ದು ಸಾರ್ವಜನಿಕ ರಸ್ತೆಗಳು ಹದಗೆಟ್ಟಿರುತ್ತವೆ, ಅಕ್ರಮದಂಧೆಗಳ ವಾಹನಗಳ ವೇಗದ ಓಡಾಟದಿಂದಾಗಿ ಭಯದಲ್ಲಿ ಓಡಾಡುವಂತಾಗಿದೆ. ಪ್ರಮುಖವಾಗಿ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಹೊಳೆ, ಮದ್ಲಾಪುರ ಸಾರ್ವಜನಿಕರು ಜೀವ ಹೊಳೆ, ‘ರಂಗದಾಳ, ಹಳ್ಳ ಮುಸ್ಟೂರು ಹಳ್ಳ, ಯಡಿವಾಳ ಹೊಳೆಯಿಂದ ಮಾನ್ವಿ ಪೋತ್ನಾಳ, ರಾಯಚೂರುಗಳಿಗೆ ಅಕ್ರಮವಾಗಿ ದಂಧೆಗಳು ನಡೆಯುತ್ತಿರುತ್ತವೆ. ಮಾತ್ರವಲ್ಲದೆ ಬುರಾಂಪೂರ ಸಂಜೀವರಾಯನ ಗುಡಿ ಪಕ್ಕದಲ್ಲಿರುವ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿದ್ದು ರಾತ್ರಿಯಲ್ಲಿ ಟಿಪ್ಪರ್‌ಗಳ ಮೂಲಕ ಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಲು, ಲಾರೆನ್ಸ್ ಮಾನ್ವಿ, ಭೀಮಣ್ಣ ಮದ್ಲಾಪೂರು ಸೇರಿದಂತೆ ಇತರರು ಇದ್ದರು.