ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಸಿಸಿ ಕ್ಯಾಮರಾ ಅಳವಡಿಸಲು ಆಗ್ರಹ

ಲಿಂಗಸೂಗೂರ,ಮೇ.೨೪-
ಪಟ್ಟಣದಲ್ಲಿ ಸಂಚಾರ ಸಮಸ್ಯೆ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಮತ್ತು ನಿಯಂತ್ರಣಕ್ಕೆ ಸಿ.ಸಿ ಕ್ಯಾಮರ ಹಾಗೂ ಕ್ರಾಸ್ ಸಿಗ್ನಲ್‌ಗಳನ್ನು ಅಳವಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕಲಬುರಗಿಯಿಂದ ಬೆಂಗಳೂರು ಹಾಗೂ ಬಾಗಲಕೋಟೆಯಿಂದ ಹೈದ್ರಬಾದಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ ಸ್ಥಾನವಾಗಿದ್ದು, ಇತ್ತೀಚಿಗೆ ವಾಹನಗಳ ಓಡಾಟದ ಹೆಚ್ಚಾಗಿ ಪಟ್ಟಣದ ಬಸ್ ನಿಲ್ದಾಣ ವೃತ್ತ, ಬಸವಸಾಗರ ಕ್ರಾಸ್ ಹಾಗೂ ಬುದ್ದಿನ್ನಿ ಆಸ್ಪತ್ರೆಯ ಮುಂದುಗಡೆ ಪ್ರತಿದಿನ ಟ್ರಾಫಿಕ್ ಸಮಸ್ಯೆಯುಂಟಾಗಿ ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಿ, ಟ್ರಾಪೀಕ್ ಸಿಗ್ನಲ್ ಗಳನ್ನು ಅಳವಡಿಸಬೇಕು, ಇದೆ ಸ್ಥಳದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆ ಬಜಾರಿನಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿದರೆ ಮೋಟಾರ್ ಸೈಕಲ್ ಕಳ್ಳತನ, ಸಂತೆಯಂದು ಬಜಾರಿನಲ್ಲಿ ನಡೆಯುವ ಮೋಬೈಲ್ ಕಳ್ಳತನ ಮಾಡುವರು ಸಿಕ್ಕಿಹಾಕಿಕೊಳ್ಳಬಹುದೆಂಬ ಅಭಿಪ್ರಾಯ ಲಿಂಗನ್ನೂರು ಪಟ್ಟಣದ ನಾಗರಿಕರಲ್ಲಿದೆ ಹಾಗೂ ಪಟ್ಟಣದಲ್ಲಿ ಮಹಿಳೆಯವರು ಮಕ್ಕಳು ವಾಯು ವಿಹಾರಕ್ಕೆ ಬರುವ ನೂತನ ಉದ್ಯಾನವನ ಸ್ಪೋರ್ಟ್ ಕ್ಲಬ್ ಹತ್ತಿರ, ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ರಾತ್ರಿ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಕುಡಿದು ಗಲಾಟೆ ಮಾಡುವುದು, ಬಾಟಲಿಗಳನ್ನು ಒಡೆದು ಹಾಕುವುದನ್ನು ನಿಯಂತ್ರಣಕ್ಕೆ ತರಬೇಕು ಮತ್ತು ಮಟಕಾ, ಇಸ್ಪೀಟ್ ಜೂಜಾಟದಲ್ಲಿ ತೊಡಗಿಸಿಕೊಂಡ ಯುವಕರೆನ್ನುವ ಭಯದಲ್ಲಿ ಬದುಕುತ್ತಿರುವ ಪಾಲಕರ ಆತಂಕವನ್ನು ದೂರ ಮಾಡುವ ದಿಶೆಯಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಿಲಾನಿಪಾಷ, ಹನುಮಂತ ನಾಯಕ, ಅಜಿಜ್ ಪಾಷ್, ಶಿವರಾಜ ನಾಯಕ, ಅಲ್ಲಾವುದ್ದಿನ್ ಬಾಬಾ, ರವಿಕುಮಾರ್ ಬರಗೂಡಿ, ಆಸೀಫ್, ಆರಿಫ್, ರಾಜಾ ಇನ್ನಿತರು ಇದ್ದರು.