ಚನ್ನಮ್ಮನ ಕಿತ್ತೂರ,ಮಾ30: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಅಂತಹದ್ದೇನುದರೂ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕಿತ್ತೂರ ಕ್ಷೇತ್ರ ಚುನಾವಣಾಧಿಕಾರಿ ರೆಶ್ಮಾ ಹಾನಗಲ್ಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಕ್ಷೇತ್ರದಲ್ಲಿ 230 ಮತಗಟ್ಟೆಗಳಿವೆ. 19,2891 ಮತದಾರರಿದ್ದು ಅದರಲ್ಲಿ 97,489 ಪುರುಷರು ಹಾಗೂ 95,401 ಮಹಿಳಾ ಮತದಾರಿದ್ದಾರೆ. ಕಿನಾವಿವಿ ಸಂಘದ ಕಾಲೇಜಿನಲ್ಲಿ ಚುನಾವಣಾ ತರಬೇತಿ ಶಿಬಿರ ನಡೆಸಲಾಗುವುದು. ಅಲ್ಲಿ ಮತಯಂತ್ರಗಳಿಗಾಗಿ ಬಿಗಿಭದ್ರತೆ ಕೊಠಡಿ ಕಾಯ್ದಿರಿಸಲಾಗಿದೆ. ಅಲ್ಲಿ ಯಾವುದೇ ಅಕ್ರಮ ಕಂಡುಬಂದರೆ ದೂರವಾಣಿ ಸಂಖ್ಯೆ 0831-2565555 ಮತ್ತು 08288-286106 ಕರೆ ಮಾಡಿ ಮಾಹಿತಿ ನೀಡಬಹುದೆಂದರು. ಈ ವೇಳೆ ಸಿಪಿಐ ನಿತ್ಯಾನಂದ ಪಂಡಿತ ಮಾತನಾಡಿ ಚುನಾವಣೆಯನ್ನು ಬಿಗಿಭದ್ರತೆಯಿಂದ ನಡೆಸಲಾಗುವುದು ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ ಯಾರಾದರೂ ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಅಂತವರ ಮೇಲೆ ಕಠೀಣ ಕ್ರಮ ಕೈಗೊಂಡು ಜೈಲಿಗೆ ಅಟ್ಟಲಾಗುವುದೆಂದರು.
ಈ ಸಮಯದಲ್ಲಿ ತಾಲೂಕ ದಂಡಾಧಿಕಾರಿ ರವೀಂದ್ರ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ನೇಸರಗಿ ಸಿಪಿಐ ಆಯ್.ಸಿ.ಕಲ್ಯಾಣಶೆಟ್ಟಿ, ತಹಶೀಲ್ದಾರ ಕಛೇರಿ ಸಿಬ್ಬಂದಿ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.