ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ

ದೇವದುರ್ಗ.ಜು.೨೨- ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಶಿವಕುಮಾರ್ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಶಿವಕುಮಾರ್ ಅವರು ಪಟ್ಟಣದ ಸರ್ಕಲ್ ಕಚೇರಿಗೆ ಗುರುವಾರ ಭೇಟಿ ನೀಡಿ ಬಳಿಕ ಮಾತನಾಡಿದರು. ಅಕ್ರಮ ಚಟುವಟಿಕೆಗಳಿಂದ ಯುವ ಜನಾಂಗ ಅಡ್ಡ ದಾರಿಯಿಡುತ್ತಿದೆ. ಹೀಗಾಗಿ,ಎಲ್ಲ ತರಹದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಮತ್ತು ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿಗೆ ಆರ್. ಶಿವಕುಮಾರ್ ಅವರಿಗೆ ವಕೀಲರಾದ ಸುಕುಮುನಿರೆಡ್ಡಿ, ಪುರಸಭೆ ಸದಸ್ಯ ನಾಗಪ್ಪ ನಾಡದಾಳ, ಹನುಮಯ್ಯ ದೊರೆ, ಸಾಬಣ್ಣ ನಾಯಕ ಸನ್ಮಾನಿಸಿದರು. ಜಾಲಹಳ್ಳಿಯಿಂದ ರಾಯಚೂರಿಗೆ ಹೋಗುವಾಗ ದೇವದುರ್ಗ ಪಟ್ಟಣದ ಪೊಲೀಸ್ ಸ್ಟೇಷನ್‌ಗೆ ಭೇಟಿ ನೀಡಿದರು. ಬಳಿಕ ಗಬ್ಬೂರು ಮೂಲಕ ರಾಯಚೂರಿಗೆ ತೆರಳಿದರು. ಈ ಸಂದರ್ಭ ದಲ್ಲಿ ಸಿಪಿಐ ಹನುಮಂತಪ್ಪ ಸಣ್ಣಮನಿ, ಸಿಪಿಐ ಆರ್‌ಎಂ. ನದಾಫ್, ಪಿಎಸ್‌ಐ ಸುಜಾತ ನಾಯಕ, ಜಾಲಹಳ್ಳಿ ಪಿಎಸ್‌ಐ ಮುದ್ದುರಂಗಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.