ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ

ಸೈದಾಪುರ:ಮಾ.15:ಪಟ್ಟಣದಲ್ಲಿ ಮಟಕಾ ಇಸ್ಪೀಟು ಸೇರಿದಂತೆ ವಿವಿಧ ಅಕ್ರಮ ಚಟುವಟಕೆಗಳು ರಾಜರೋಷವಾಗಿ ನಡೆಯುತ್ತಿದ್ದೂ ಇವುಗಳಿಗೆ ಸೂಕ್ರ ಕ್ರಮ ಕೈಗೊಂಡು ಕಡಿವಾಣ ಹಾಕುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಸೈದಾಪುರ ಠಾಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕದೀಮರು ಮನೆ, ಅಂಗಡಿಗಳ ಬೀಗ ಮುರಿದು ದರೋಡೆ ಮಾಡುತ್ತಿದ್ದಾರೆ. ಇದಲ್ಲದೆ ಬೈಕ್‍ಗಳು ಸೇರಿದಂತೆ ರೈತರ ಜಮೀನುಗಳ ಮೋಟಾರು ಪಂಪಸೇಟುಗಳು ಕಳ್ಳತನವಾಗುತ್ತೀವೆ. ಇದರ ಬಗ್ಗೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಇನ್ನೂ ಮುಂದೆ ರಾತ್ರಿ ಪೆÇೀಲೀಸ್ ಬಂದೋ ಬಸ್ತು ನೀಯೋಜಿಸಿ ಕಾನೂನು ಕ್ರಮ ಕೈಗೊಳ್ಳವಂತೆ ಜಿಲ್ಲಾಧ್ಯಕ್ಷÀ ಮಲ್ಲಿಕಾರ್ಜುನ ಎಂ.ರಾಮಸಮುದ್ರ. ಉಪಾಧ್ಯಕ್ಷ ದಿಲೀಪ್ ಕುಮಾರ ಜೈನ. ತಾಲೂಕು ಉಪಧ್ಯಕ್ಷ ಪಾಂಡು ಸೇರಿದಂತೆ ಇತರರು ಒತ್ತಾಯಿಸಿದರು.