ಅಕ್ರಮ ಗೋಸಾಗಾಟ ಪತ್ತೆಮುಂಜಾನೆ ನಡೆದ ಕಾರ್ಯಾಚರಣೆ: ಇಬ್ಬರ ಸೆರೆ


ವಿಟ್ಲ, ನ.೨೪- ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ವಿಟ್ಲ ಪೋಲೀಸರ ತಂಡ ಆರೋಪಿಗಳ ಸಹಿತ ದನಗಳನ್ನು ವಶಕ್ಕೆ ಪಡೆದಕೊಂಡ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಬೋಳಂತರು ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಅಗ್ರಿ ನಿವಾಸಿ ಸಾಹೇಬ್ ಬ್ಯಾರಿ ಹಾಗೂ ಪ್ರದೀಪ್ ಸಿಕ್ವೀರಾ ಬಂದಿತ ಆರೋಪಿಗಳು. ವಿಟ್ಲ ಎಸ್.ಐ. ಸಂದೀಪ್ ಮತ್ತು ಅವರ ತಂಡ ರೌಂಡ್ಸ್ ನಲ್ಲಿದ್ದ ವೇಳೆ ಬೋಳಂತರು ಎಂಬಲ್ಲಿ ರಿಕ್ಷಾ ಎಂದು ಟೆಂಪೋ ಒಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ. ಇಂದು ಮುಂಜಾನೆ ಪೊಲೀಸರು ಕರ್ತವ್ಯದಲ್ಲಿರುವ ವೇಳೆ ಸಂಶಯಗೊಂಡು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಓಡಿ ಹೋಗಲು ಪ್ರಯತ್ನಿಸಿ ದ್ದಾರೆ. ಬಳಿಕ ವಾಹನ ನಿಲ್ಲಿಸಿ ತಪಾಸಣೆ ನಡೆಸಿದಾಗ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಮೂರು ದನಗಳನ್ನು ಕಟ್ಟಿ ಹಾಕಿ ವಧೆ ಮಾಡಲು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಆರೋಪಿ ಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆರೋಪಿ ಗಳನ್ನು ಬಂಧಿಸಿ ಗೋವಧೆ ಮತ್ತು ಅಕ್ರಮ ಸಾಗಾಟದ ಸಂಬಂಧ ಪ್ರಕರಣ ದಾಖಲಿಸಲಾಗಿದೆ