ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರ ಬಂಧನ

ಹನೂರು: ಮೇ.1: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ರಾಮಪುರ ಪೆÇಲೀಸರು ಬಂಧಿsಸಿರುವ ಘಟನೆ ನಡೆದಿದೆ.
ಹನೂರು ತಾಲೂಕಿನ ಪುಷ್ಪಪುರ ಗ್ರಾಮದ ವೆಂಕಟಪ್ಪ ಹಾಗೂ ಈತನ ಮಗ ಪ್ರಭು ಬಂಧಿತ ಆರೋಪಿಗಳು.
ಘಟನೆಯ ವಿವರ: ಕೌದಳ್ಳಿ ಸಮೀಪದ ಪುದನಗರ ಗ್ರಾಮದ ಬಸ್ ನಿಲ್ದಾಣದ ಬಳಿ ವ್ಯಕ್ತಿಗಳಿಬ್ಬರು ಮಾರಾಟ ಮಾಡಲು ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ರಾಮಪುರ ಪೆÇಲೀಸ್ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗೇಂದ್ರ, ಲಿಂಗರಾಜು ಎಸ್.ಎಲ್, ಮಂಜುನಾಥ್, ಸುರೇಶ್, ಸಲ್ಮಾನ್, ಶಿವಪ್ಪ ಲಮಾಣಿ, ರವಿಪ್ರಸಾದ್, ಚಾಲಕರಾದ ನಾಗರಾಜು ದಾಳಿ ನಡೆಸಿ ಅಕ್ರಮ ಸಾಗಾಟ ಮಾಡುತ್ತಿದ್ದ 920 ಗ್ರಾಂ ಒಣ ಗಾಂಜಾ, ಸಾಗಣೆ ಮಾಡಿಸಲು ಬಳಸಿದ್ದ ದ್ವಿಚಕ್ರವಾಹನ ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.