ಅಕ್ರಮ ಗಾಂಜಾ ಸಂಗ್ರಹ : ಇಬ್ಬರ ಬಂಧನ

ಹಬೂರು, ನ.20: ವಾಸದ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದರೆನ್ನಲ್ಲಾದ ಇಬ್ಬರನ್ನು ಚಾಮರಾಜನಗರದ ಅಬಕಾರಿ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ತಿಮ್ಮರಾಜಪುರ ಗ್ರಾ.ಪಂ ಎರೆಕಟ್ಟೆ ಗ್ರಾಮದ ತಮ್ಮಡಿ ಜಡೇಗೌಡ ಮತ್ತು ಮಾರಮ್ಮ ಎಂಬವರೇ ಬಂಧಿತರಾಗಿದ್ದಾರೆ. ಬಂಧಿತರು ಅಕ್ರಮವಾಗಿ ತಮ್ಮ ಮನೆಯಲ್ಲಿ 2.750 ಕೆಜಿ ಗಾಂಜಾವನ್ನು ಸಂಗ್ರಹಿಸಿದ್ದರಲ್ಲದೆ, ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ನಿನ್ನೆ ಚಾ.ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ತಮ್ಮ ಸಿಬ್ಬಂದಿಯೊಂದಿಗೆ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರಲ್ಲದೆ ಇಬ್ಬರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಇಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಕೆ.ಪ್ರದೀಪ್‍ಕುಮಾರ್, ರಮೇಶ್.ಎಂ, ಎಂ.ಎನ್.ಸುಂದರಪ್ಪ, ಎನ್.ಸುಜನ್‍ರಾಜ್, ಸಿದ್ದಯ್ಯ, ಸಿ.ಮಂಜುಪ್ರಸಾದ್ ಪಾಲ್ಗೊಂಡಿದ್ದರು.