ಅಕ್ರಮ ಗಾಂಜಾ ಮಾರಾಟ: ಮೂವರ ಬಂಧನ

ವಿಜಯಪುರ,ಜೂ.11 : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ಸಾವಿರ ಮೌಲ್ಯದ ಗಾಂಜಾವನ್ನು ಪೆÇಲೀಸರು ವಶಪಡಿಸಿಕೊಂಡ ಘಟನೆ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ನಡೆದಿದೆ.
ನಿಖಿಲ್ ಪವಾರ, ಸೋಹೇಲ್ ಗುಂಡಬಾವಡಿ ಹಾಗೂ ಸಾಹೀಲ್ ಜಾಗೀರದಾರ ಬಂಧಿತ
ಆರೋಪಿಗಳು.
ಈ ಮೂವರು ಗಾಂಜಾ ತರಿಸಿ, ತಮ್ಮ ಸ್ವಂತ ಲಾಭಕ್ಕೋಸ್ಕರ ಗಾಂಜಾ ಮಾರಾಟ ಮಾಡುವ ಸಿದ್ಧತೆಯಲ್ಲಿದ್ದಾಗ
ಪೆÇಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 372 ಗ್ರಾಂ
ತೂಕದ ಗಾಂಜಾ ಜೊತೆಗೆ ಕಾರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಜಯಪುರ ಗ್ರಾಮೀಣ ಪೆÇಲೀಸ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.