ಅಕ್ರಮ ಗಾಂಜಾ ಮಾರಾಟಸಿಇಎನ್ ಪೋಲಿಸರಿಂದ 45 ಕೆಜಿ ಹಸಿ ಗಾಂಜಾ ವಶ

ಆಲಮೇಲ:ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ತಡೆಗಟ್ಟಲು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು ಪಣ ತೊಟ್ಟಿದ್ದು ಆಲಮೇಲ ತಾಲೂಕಿನಲ್ಲಿ ಮೋದಲಿಂದಲೂ ಅಕ್ರಮ ಗಾಂಜಾ ಮಾರಾಟ ಜಾಲ ವಿದೆ ಎಂಬ ಮಾಹಿತಿ ಆದರಿಸಿ ಶುಕ್ರವಾರ ವಿಜಯಪುರ ಸೈಬರ್,ಆರ್ಥಿ ಮತ್ತು ಮಾದಕ ವಸ್ತು ಅಪರಾಧ ಪೋಲಿಸರು ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಸುಮಾರು 45 ಕೆಜಿ ಹಸಿ ಗಾಂಜಾ ಹಾಗೂ 3ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಳಗಾನೂರ ಗ್ರಾಮದ ಮಲ್ಲಸಿದ್ದಪ್ಪ ಮದರಿ(54) ಪ್ರವಿಣ ಅರವಿಂದ ಮಧರಿ(25) ಎಂಬ ಇಬ್ಬರು ಆರೋಪಿಗಳನ್ನು ಸಿಇಎನ್ ಪಿಐ ಸುನೀಲ ಕಾಂಬಳೆ ನೇತೃತ್ವದಲ್ಲಿ ಬಂದಿಸಲಾಗಿದ್ದು ಇವರು ತಮ್ಮ ಜಮೀನು ಒಂದರಲ್ಲಿ ಗಾಂಜಾ ಬೆಳೆಯುತ್ತಿದರು,ಅಲ್ಲದೆ ಬೆಳೆದ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ಪಡೆದು ಇವರನ್ನು ಬಂದಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳುದು ಬಂದಿದೆ.

ಅಲ್ಲದೆ ಇಲ್ಲಿನ ಹಲವಾರು ಯುವಕರು ಗಾಂಜಾ ಮಾರಾಟದಲ್ಲಿ ತೊಡಗಿದ್ದು ಆಲಮೇಲ ಪಟ್ಟಣ ಸೇರಿ ಇತರೆ ಕಡೆ ಇನ್ನೂ ಗಾಂಜಾ ಮಾರಾಟದ ಜಾಲ ಇದೆ ಎನ್ನಲಾಗುತ್ತಿದೆ, ಆಲಮೇಲ ಪೋಲಿಸ್ ಠಾಣೆಯಲ್ಲಿ ಹಲವಾರು ಬಾರಿ ಗಾಂಜಾ ರೇಡ್ ಮಾಡಿ ಕೇಸ್ ಹಾಕಲಾಗಿದೆ ಅವುಗಳ ಬೆನ್ನೆತ್ತಿ ಗಾಂಜಾ ಮಾರಾಟ ಜಾಲಕ್ಕೆ ಆಲಮೇಲ ಪೊಲಿಸ್‍ರು ಮುಂದಾಗಬೇಕು ಎಂದು ಹಲವಾರು ಸಾಮಾಜಿಕ ಹೋರಾಟಗರು ಆಗ್ರಹವಾಗಿದೆ, ಆದರೆ ಆಲಮೇಲ ಪೋಲಿಸರು ಮಾತ್ರ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.