ಅಕ್ರಮ ಗಾಂಜಾ ಬೆಳೆ: ವ್ಯಕ್ತಿ ಬಂಧನ

ಕೆ.ಆರ್.ಪೇಟೆ. ಸೆ.16- ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲಿಸ್ ಠಾಣೆಯ ಪೊಲಿಸರು ಬಂಧಿಸಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಂಟಣ್ಣನ ಬೋರೇಗೌಡನ ಮಗ ಮಂಜೇಗೌಡ(40) ಬಂಧಿತ ವ್ಯಕ್ತಿ, ಮತ್ತೋರ್ವ ಲೇಟ್ ಈರೇಗೌಡರ ಮಗ ರಾಜೇಗೌಡ ಅಲಿಯಾಸ್ ರಾಜಣ್ಣ ಪರಾರಿಯಾಗಿರುವ ವ್ಯಕ್ತಿ, ಆ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿಮಾಡಿದ ಪೊಲಿಸರು ಮನೆಯ ಹಿಂಭಾಗದ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸುಮಾರು 16 ಕೆಜಿ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಡ್ರಗ್ಸ್ ಧಂದೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗ್ರಾಮಗಳಲ್ಲಿ ಬೆಳೆದಿರುವ ಅಕ್ರಮ ಗಾಂಜಾಬೆಳೆಯ ಘಟನೆ ತೀವ್ರ ಕುತೂಹಲ ಕೆರಳಿಸಿದೆ. ಆರೋಪಿತರ ವಿರುದ್ದ ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಾಳಿ ಸಂದರ್ಭದಲ್ಲಿ ತಹಶೀಲ್ದಾರ್ ಶಿವಮೂರ್ತಿ ಸಿಪಿಐ ಕೆ.ಎನ್.ಸುಧಾಕರ್, ಪಿಎಸೈ ತೊಳಚನಾಯಕ್, ಸಿಬ್ಬಂದಿಗಳಾದ ಬಸಪ್ಪ,ಚಂದ್ರಸೇಖರ್,ಸುಜಾತ,ರೇವಣ್ಣ,ವೆಂಕಟೇಶ್ ಸೇರಿದಂತೆ ಹಲವರು ಇದ್ದರು.