ಅಕ್ರಮ ಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಕೋಲಾರ, ಜು. ೨೬: ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ದಿನ್ನೆಹೊಸಳ್ಳಿ ಗ್ರಾಮದ ಸರ್ವೇ ನಂಬರ್ ೫೮ ರಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾದಿಗ ಸಮುದಾಯ ನಾಯಕರಿಂದ ಪ್ರತಿಭಟನೆ ಕಾರ್ಯಕ್ರಮ ದಿನ್ನೇಹೊಸಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ನೊಂದ ದಿನ್ನೆಹೊಸಳ್ಳಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ದೇವರಾಜ್, ಹಾರೋಹಳ್ಳಿ ರವಿಕುಮಾರ್, ಕೋಲಾರ್ ಶ್ರೀನಿವಾಸ್, ನಾರಾಯಣಸ್ವಾಮಿ, ಆಲೇರಿ ಮುನೀರಾಜು, ಚನ್ನಸಂದ್ರ ಮುನಿರಾಜ್, ಬಂತಿಗಾನಲ್ಲಿ ಪೂಜೆಶ್, ಬೈರಸಂದ್ರ ಮುನಿಯಪ್ಪ , ವರದರಾಜ್, ಬೆಳ್ಳೂರು ನಾರಾಯಣಸ್ವಾಮಿ, ಇರಗಸಂದ್ರ ನಾರಾಯಣಸ್ವಾಮಿ, ಮುನಿರಾಜು, ವೆಂಕಟೇಶ್, ಆಂಜಿನಪ್ಪ,ಶೇಶಿಕುಮರ್, ವೆಂಕಟೇಶ, ನಾಗರಾಜ್, ಮಂಜುನಾಥ್ ಇನ್ನೂ ಹಲವು ನಾಯಕರು ಭಾಗವಹಿಸಿದ್ದರು.