ಅಕ್ರಮ ಗಣಿಗಾರಿಕೆ ಪ್ರಕರಣ ನಾಗೇಂದ್ರ, ಜನಾರ್ಧನರೆಡ್ಡಿ ಸೇರಿ 10 ಜನರ  ವಿರುದ್ಧ ಕ್ರಿಮಿನಲ್ ಕೇಸು ದಾಖಲೆಗೆ ಆದೇಶ


(ಸಂಜೆವಾಣಿ ವಾರ್ತೆ)
ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರಿಗೆ ಸಂಕಷ್ಟ ಎದುರಾಗಿದೆ.
ಅವರ ವಿರುದ್ಧ ಮಂಜುನಾಥ್ ಅಣ್ಣಿಗೇರಿ ದಾಖಲಿಸಿ ದೂರಿನ ವಿಚಾರಣೆಯನ್ನು  ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಜೆ. ಪ್ರೀತ ನಡೆಸಿದ ವಿಚಾರಣೆಯಲ್ಲಿ 
ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 2.82 ಕೋಟಿ ರೂ ನಷ್ಟ ಉಂಟಾಗಿದೆ.
ಇದರಿಂದ ಸಚಿವ ನಾಗೇಂದ್ರ, ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಸೇರಿದಂತೆ 10 ಜನರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತದ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ ಕಾಯಿದೆ ಸೆಕ್ಷನ್ 4(1), 4(1ಎ), 21 ಮತ್ತು 23 ರ
ಅಡಿಯಲ್ಲಿ ನಾಗೇಂದ್ರ, ಜನಾರ್ಧನ ರೆಡ್ಡಿ,  ಆಲಿಖಾನ್,ಕೆ.ನಾಗರಾಜ್,  ಮಧು ವರ್ಮ, ವಿ.ಚಂದ್ರಶೇಖರ, ಸಿ.ಶ್ರೀಕಾಂತ್,
ದೇವಿ ಮತ್ತು ಮಧುಶ್ರೀ ಎಂಟರ್ ಪ್ರೈಸಸ್, ಈಗಲ್ ಟ್ರೇಡರ್ಸ್ ಅಂಡ್  ಲಾಜಸ್ಟಿಕ್,    ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ  ಎಲ್ಲಾ ಆರೋಪಿಗಳಿ ಗೂ ಸಮನ್ಸ್ ಜಾರಿ ಮಾಡುವಂತೆ ಸೂಚಿಸಿದೆ.

One attachment • Scanned by Gmail