ಅಕ್ರಮ ಗಣಿಗಾರಿಕೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು,ಏ.೨೮- ಅಕ್ರಮ ಮರಂ ಗಣಿಗಾರಿಕೆಯಿಂದ ಮೃತಪಟ್ಟಿರುವ ವಿಠಲ್ ಕುಟುಂಬಸ್ಥರಿಗೆ ಪರಿಹಾರ ನೀಡಿ, ಅಕ್ರಮ ಗಣಿಗಾರಿಗೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಗತಿಪರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಯೂನಿಯನ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ದೇವಸೂಗೂರು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ವಡ್ಲೂರು ಗ್ರಾಮದ ಸರ್ವೆ ನಂ ೮೬ ರಲ್ಲಿ ಅಕ್ರಮ ಮರಂ ಗಣಿಗಾರಿಕೆಯನ್ನು ಭಾರತಮಾಲಾ ಉಪ ಗುತ್ತೇದಾರ ವೀರಬಾಬು ಮತ್ತು ಸುನೀಲ್ ಶರ್ಮಾ ಎಂಬುವವರು ಆಂಧ್ರ ಮೂಲದವರು ಸುಮಾರು ತಿಂಗಳ ಹಿಂದೆ ಸದರಿ ಸರ್ವೇ ನಂ.೧೦ ಎಕರೆ ಜಮೀನನಲ್ಲಿ ಜೆಸಿಬಿ ಮತ್ತು ಹಿಟಾಚಿಗಳಿಟ್ಟು, ಅಕ್ರಮ ಮರಂ ಸಾಗಾಣಿಕೆ ಮಾಡುತ್ತಿದ್ದಾರೆ. ಸದರಿ ಗುತ್ತೇದಾರರು ಯಾವುದೇ ರೀತಿಯ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಪಡೆಯದೆ ರಾಜಾರೋಷವಾಗಿ ಅಕ್ರಮ ಮೊರಂ
ಗಣಿಗಾರಿಕೆಯನ್ನು ಮಾಡುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದರಿ ಜಮೀನು ಗ್ರಾಮದ ನಿವಾಸಿ ಸಿದ್ರಾಮಪ್ಪ ಗೌಡ ಇವರಿಗೆ ಸೇರಿರುತ್ತದೆ. ಭೂಮಿ ಮಾಲಿಕರಿಗೆ ಹಣದ ಆಮಿಷ ತೋರಿಸಿ ಫಲವತ್ತಾದ ಭೂಮಿಯನ್ನು ಕೊಳ್ಳೆ ಹೊಡೆದು ಅಕ್ರಮವಾಗಿ ಮರಂ ಸಾಗಿಸುತ್ತಿದ್ದಾರೆ.
ಮೃತ ವಿಠಲ್ ಎಂಬ ಯುವಕ ಸದರಿ ಜಮೀನಿನಲ್ಲಿ ದೊಡ್ಡ ಗುಂಡಿ ಇರುವುದರಿಂದ ವಿಠಲ್ ಎಂಬ ಯುವಕ ಕಾಲು ಜೆರಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದು, ಈತನಿಗೆ ಕೇವಲ ೨೫ ವರ್ಷ ವಯಸ್ಸು ತೀವ್ರ ಬಡತನ ಇರುವುದರಿಂದ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂದು ದೂರಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನಿರ್ಲಕ್ಷ ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಂಗಪ್ಪ, ಆನಂದ ಏಗನೂರು, ಕಡಗೋಳ್ ತಿಮ್ಮಿಪ್ಪ, ಸಿದ್ದಪ್ಪ, ನಾಗೇಂದ್ರ ಸೇರಿದಂತೆ ಉಪಸ್ಥಿತರಿದ್ದರು.