ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹ

ಕೋಲಾರ, ಡಿ.೯:ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ದಂಧೆ ತಡೆಗಟ್ಟುವಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ಈ ಸಂಬಂಧವಾಗಿ ಹಲವು ವಿವರ ಪೂರ್ಣ ವಿಚಾರಗಳನ್ನು ಉಲ್ಲೇಖಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರಿಗೆ ಮನವಿಯನ್ನು ನೀಡಲಾಯಿತು.
ಜಲ್ಲಾದ್ಯಂತ ಕೆಲವು ಪ್ರಭಾವಿಗಳು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿ ಸರ್ಕಾರಿ ಕೆಲಸಗಳನ್ನು ಪಡೆದಿದ್ದು, ಕೂಡಲೇ ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಎಂ.ಚಂದ್ರಶೇಖರ್, ವಿಭಾಗೀಯ ಸಂಚಾಲಕ ವೇಮಗಲ್ ರಮೇಶ್ ವಿ ಎಂ, ಜಿಲ್ಲಾ ಸಂಚಾಲಕರಾದ ವಕ್ಕಲೇರಿ ಶಂಕರ್, ಬೊಟ್ಟು ರಾಜಪ್ಪ, ಮಾಲೂರು ರಾಜಶೇಖರ್ ಬೌದ್ಧ, ಚಿನ್ನಾಪುರ ನಾರಾಯಣಸ್ವಾಮಿ, ಉರಿಗಿಲಿ ಆನಂದ್, ಜಮ್ಮನಹಳ್ಳಿ ನಾರಾಯಣಸ್ವಾಮಿ, ಕಮ್ಮಸಂದ್ರ ಮಣಿ, ಬೈರಂಡಹಳ್ಳಿ ರವೀಂದ್ರಕುಮಾರ್, ಅವಿನಾಶ್, ಬಂಗಾರಪೇಟೆ ಗೋವಿಂದರಾಜು, ಬೋಡಿಗುರ್ಕಿ ಅರುಣ, ಮಾಲೂರು ಗಂಗಾಧರ್, ಮೆಡಿಹಾಳ ಹೆಚ್ ಮುನಿವೆಂಕಟಪ್ಪ, ರಘುಪತಿ ಹೊಸಹಳ್ಳಿ ಮುನಿಹನುಮಪ್ಪ ಇನ್ನಿತರೆ ಕಾರ್ಯಕರ್ತರು ಭಾಗವಹಿಸಿದ್ದರು.