ಅಕ್ರಮ ಕುಡಿಯುವ ನೀರಿನ ಘಟಕ ಮುಚ್ಚಲು ಆಗ್ರಹ

ಕಲಬುರಗಿ,ಸೆ 8: ನಗರದಲ್ಲಿರುವ ಅಕ್ರಮ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುವಂತೆ ಗುಲಬರ್ಗ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರರ್ಸ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಸಮದ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಕುರಿತು ಬಹಳಷ್ಟು ಸಲ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ.ನಾವು ಸರಕಾರ ಸೂಚಿಸಿದ ಗೈಡ್ ಲೈನ್ಸ್ ಪ್ರಕಾರ, ಯೋಗ್ಯದರದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರು ಸರಬರಾಜು ಮಾಡುತ್ತೇವೆ.ಸಕಾಲಕ್ಕೆ ತೆರಿಗೆ ಕಟ್ಟುತ್ತೇವೆ.ಆದರೆ ನಗರದಲ್ಲಿರುವ ಐಎಸ್‍ಐ ಮಾರ್ಕ ಹೊಂದಿಲ್ಲದ,ಅಕ್ರಮ ಕುಡಿಯುವ ನೀರಿನ ಘಟಕಗಳಿಂದಾಗಿ ನಮಗೆ ಹಿನ್ನಡೆಯಾಗಿದೆ.ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ತೀವ್ರ ಗಮನ ಹರಿಸಲು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಮುಕ್ತದೀರ್,ಶಿವು ಕೊರಳ್ಳಿ ಅವರು ಸೇರಿದಂತೆ ಹಲವರಿದ್ದರು.