ಅಕ್ರಮ ಕಸಾಯಿಖಾನೆ ತೆರವಿಗೆ ಮನವಿ;ಬಿಜೆಪಿ ಯುವಮೋರ್ಚಾ ಪ್ರತಿಭಟನೆ


ದಾವಣಗೆರೆ.ನ.೨೧; ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವಮೊರ್ಚಾ ಸದಸ್ಯರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಅನಧಿಕೃತವಾಗಿ ಅಕ್ರಮಕಸಾಯಿಖಾನೆಗಳು ನಡೆಯುತ್ತಿದೆ ಇದರಿಂದ ಹಿಂದೂಗಳ ಭಾವೈಕ್ಯತೆಗೆ ಧಕ್ಕೆಯುಂಟಾಗುತ್ತಿದೆ.ಗೋವಧೆಯನ್ನು ಈ ಕೂಡಲೇ ನಿಲ್ಲಿಸಬೇಕು.ಮುಖ್ಯವಾಗಿ ದಾವಣಗೆರೆ ನಗರದಲ್ಲಿ ಯಾವುದೇ ಕಸಾಯಿ ಖಾನೆಗಳಿಗೂ ಪರವಾನಿಗೆ ಇರುವುದಿಲ್ಲ ಆದರೂ ಕೂಡ ಬಾಷಾನಗರ ಮುಖ್ಯರಸ್ತೆ,ಆಜಾದ್ ನಗರ,ಹಳೇಬೇತೂರು ರಸ್ತೆ,ಕೆಟಿಜೆ ನಗರ ಈ ಭಾಗಗಳಲ್ಲಿ ಗೋವಧೆ ಮಾಡಲಾಗುತ್ತಿದೆ.ಈ ಕೂಡಲೇ ಅಕ್ರಮಕಸಾಯಿಖಾನೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಈ ಕೂಡಲೇ ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗವುದು ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಭಜರಂಗಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಜು ನೀಲಗುಂದ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕಂದನಕೋವಿ, ಕಿರಣ್ ಎಚ್, ಉಪಾಧ್ಯಕ್ಷರಾದ ಪುಲಯ, ಅಭಿಷೇಕ್ ಎಳೆಹೊಳೆ ಕಾರ್ಯದರ್ಶಿಗಳಾದ ಪ್ರದೀಪ್. ದೊಡ್ಡೇಶ್. ಖಜಾಂಚಿ ಗಣೇಶ್ ಬಾಬು. ಸದಸ್ಯರಾದ ಸಂತೋಷ್, ಚಿರು, ಸಂತೋಷ್, ಸಚಿನ್, ನಂದೀಶ್, ಮಂಜು,
ಯುವ ಮುಖಂಡ ನವೀನ್ ಕುಮಾರ್, ಮಂಜು, ಮಾಂತೇಶ, ಚಿರು,ಉತ್ತರದ ಯುವ ಮೋರ್ಚಾ ಅಧ್ಯಕ್ಷರು ಸಚಿನ್ ವರ್ಣೇಕರ್. ಹರೀಶ್ ಶಾಮನೂರು. ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು .