ಅಕ್ರಮ ಕರ್ಮರ ಸೌದೆ ಸಾಗಾಟ: ಇಬ್ಬರು ವಶ


ಮಂಗಳೂರು, ಮಾ.೨೫- ತಾಲೂಕಿನ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ರಾ.ಹೆ.೬೬ರಲ್ಲಿ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕರ್ಮರ ಜಾತಿಯ ಸೌದೆ ಸಾಗಾಟದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಬೆಳ್ತಂಗಡಿ ನಿವಾಸಿಗಳಾದ ಚಾಲಕ ಸಿದ್ದೀಕ್, ಹಸನಬ್ಬ ಎಂಬವರನ್ನು ವಶಕ್ಕೆ ಪಡೆದು, ಬಿಡುಗಡೆಗೊಳಿಸ ಲಾಯಿತು. ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ವಿನಯ್ ಕುಮಾರ್, ಸೋಮನಗೌಡ ಪಾಟೀಲ್, ಮೋಹನ ಗಂಟೆ ಹಾಗೂ ಚಾಲಕ ಸಿದ್ದಪ್ಪ ಬಾರ್ಕೇರ್ ಇದ್ದರು.