ಅಕ್ರಮ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ

ಮಂಗಳೂರು, ಮಾ.೩೦- ಮಂಗಳೂರು ತಾಲೂಕಿನ ಸುರತ್ಕಲ್ ಗ್ರಾಮದ ಮುಕ್ಕ ಎನ್‌ಹೆಚ್ ೬೬ ರಲ್ಲಿ ಅಕ್ರಮವಾಗಿ ಟಾಟಾ ಟೆಂಪೊ ೬೦೮ ನೋಂದಾಣಿ ಸಂಖ್ಯೆ:ಕೆಎ-೧೯-೩೮೯೭ರಲ್ಲಿ ರಹದಾರಿ ರಹಿತವಾಗಿ ಮಾರ್ಚ್ ೨೯ ರಂದು ಮಿಶ್ರ ಜಾತಿಯ ಕಟ್ಟಿಗೆಗಳನ್ನು ಸಾಗಾಟ ಮಾಡಿರುವ ಪ್ರಕರಣವನ್ನು  ಪತ್ತೆ ಹಚ್ಚಿ ವಾಹನ ಮತ್ತು ಸೊತ್ತುಗಳನ್ನು ಸರಕಾರದ ಪರವಾಗಿ ಅಮಾನತು ಪಡಿಸಿ ವಾಹನ  ಚಾಲಕ ಸರ್ಫರಾಜ್ ಎಂಬವರ ಮೇಲೆ ಅರಣ್ಯ ತಕ್ಷೀರು ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಸದ್ರಿ ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಯವರಾದ ಕೃಷ್ಣ, ವಿನಯ್ ಕುಮಾರ್, ಸೋಮನಗೌಡ ಪಾಟೀಲ್, ಮೋಹನ  ಹಾಗೂ ಚಾಲಕ ಸುನೀಲ್ ಬಿ.ಸಿ ನಡೆಸಿದ್ದಾರೆ.

ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಂತ್ರಿಕ ಸಹಾಯಕರು ಇವರ ನಿರ್ದೇಶನದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ನಡೆಸುತ್ತಿದ್ದಾರೆ.