
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.09: ಮೇ 10ರಂದು ಬೆಳಿಗ್ಗೆ ಏಳರಿಂದ ಸಂಜೆ 6 ಗಂಟೆವರೆಗೂ ಸಾರ್ವಜನಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರ 92 ಚುನಾವಣಾಧಿಕಾರಿ ಕೆ.,ಹೆಚ್. ಸತೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳವಾರ ಕೇವಲ ಕಾಲ್ನಡಿಗೆ ಮೂಲಕ ಪಕ್ಷದ ಬಾವುಟ ಟೋಪಿ ಇನ್ನಿತರ ಪ್ರಚಾರ ಸಾಮಗ್ರಿಗಳಿಲ್ಲದೆ ಕೇವಲ ಮನೆಮನೆ ಮತ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಕ್ಷೇತ್ರದಲ್ಲಿ ದಿನ ಕೇವಲ ಮೂರು ಜನರಿಗೆ ವಾಹನ ಮೂಲಕ ಓಡಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಹಾಗೂ ತಾಲ್ಲೂಕಿನಲ್ಲಿ ವಿಷೇಶವಾಗಿ ಐದು ಮತಗಟ್ಟೆಗಳನ್ನು ಮಾಡಲಾಗಿದೆ, ವಾಹನದಲ್ಲಿ ಕೇವಲ ಐದು ಜನ ಮಾತ್ರ ಸಂಚಾರ ಮಾಡಬೇಕು. ಚುನಾವಣಾ ಸಮಯಕ್ಕೆ 48 ಗಂಟೆಗಳ ಮೊದಲು 144 ಕರ್ಪ್ಯೂ ವಿಧಿಸಲಾಗುತ್ತದೆ. ನಾಲ್ಕು ಜನರಿರುವ 272 ತಂಡಗಳು ನಾಳೆ ನಗರದ ವಿವೇಕಾನಂದ ಶಾಲೆಯಲ್ಲಿ ಆಗಮಿಸಿ ಅಂತಿಮ ಮತ್ತು ಮೂರನೆಯ ಚುನಾವಣಾ ತರಬೇತಿ ಪಡೆದು ಅವರಿಗೆ ನಿಯೋಜನೆಗೊಳಿಸಿರುವ ಸ್ಥಳಗಳಿಗೆ ಮತಯಂತ್ರ ಮತ್ತು ಪರಿಕರಗಳೊಂದಿಗೆ ವಾಹನಗಳ ಮೂಲಕ ತೆರಳಲಿದ್ದಾರೆ.
ಒಟ್ಟು 227 ಮತಗಟ್ಟೆಗಳಿದ್ದು, ಗಡಿ ಪ್ರದೇಶ ಸೂಕ್ಷ್ಮ ಅತಿ ಸೂಕ್ಷ್ಮ ಸೇರಿದಂತೆ 113 ಮತಗಟ್ಟೆಗಳನ್ನು ಸಿಸಿ ಕ್ಯಾಮೆರಾ ಕಣ್ಗಾವಲಿನ ಮುಖಾಂತರ ವೆಬ್ ಕ್ಯಾಸ್ತಿಂಗ್ ಮಾಡಲಾಗುತ್ತದೆ. ಎಲ್ಲಾ ಮತಗಟ್ಟೆಗಳಿಗೆ ಅರೆಸೇನಾಪಡೆ ಸೇರಿದಂತೆ ಪೋಲಿಸ್ ಅಧಿಕಾರಿಗಳಾದ ಒಬ್ಬ ಡಿ.ಐ.ಎಸ್.ಪಿ, 08 ಪಿ.ಎಸ್.ಐ, 03ಸಿ.ಪಿ.ಐ 132ಸಿ.ಆರ್.ಪಿ.ಎಫ್, 136ಪೇದೆಗಳು, 98ಗೃಹರಕ್ಷಕ ದಳ
ಹಾಗೂ 43ಸೂಕ್ಷ್ಮ ಮತಗಟ್ಟೆಗಳು, 183ಸಾಮಾನ್ಯ ಮತಗಟ್ಟೆಗಳಿಗೆ ಬಂದೋಬಸ್ತು ಪಡೆಯಲಾಗಿದೆ.
ಒಟ್ಟು 2,17,181 ಮತದಾರರು ಅಂತಿಮವಾಗಿದ್ದಾರೆ. ಇದುವರೆಗೂ 29 ಪ್ರಕರಣಗಳು ದಾಖಲಾಗಿದ್ದು 29,38,452 ರೂಗಳು ವಶಪಡಿಸಿಕೊಂಡು ಖಜನೆಯಲ್ಲಿಡಲಾಗಿದೆ. ಮತಗಟ್ಟೆಯಲ್ಲಿ ಅಧಿಕಾರಿಗಳು ವಿಶೇಷವಾಗಿ ಕರ್ತವ್ಯ ನಿರ್ವಹಿಸಲಿದ್ದು ಮತದಾರರ ಸರಿತಿಸಾಲು ಹೆಚ್ಚಾದರೆ ಪ್ರತ್ಯೇಕ ಕೊಠಡಿ ಮಾಡಿದ್ದು, ಇಲ್ಲದ ಕಡೆ ಶಾಮಿಯಾನ ಹಾಕಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ, ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಮತದಾರರಿಗೆ ಯಾರೇ ಆಗಲಿ ಬೆದರಿಕೆ ಹಾಕುವುದಾಗಲಿ ಕಂಡುಬಂದಲ್ಲಿ ಚುನಾವಣೆ ಹೆಲ್ಪ್ ಡೆಸ್ಕ್ ಸಂಖ್ಯೆ 08396 22038 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.. ಈ ಸಂದರ್ಭದಲ್ಲಿ ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ತೆಕ್ಕಲಕೋಟೆ ಪೋಲಿಸ್ ಠಾಣೆಯ ಸಿ.ಪಿ.ಐ ಸುಂದೆರೇಶ್ ಇದ್ದರು.