ಅಕ್ರಮ ಕಂಟ್ರಿ ಪಿಸ್ತೂಲ್ ಜಪ್ತಿ :ಓರ್ವನ ಬಂಧನ

ವಿಜಯಪುರ, ಸ 2: ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ತಿರುಗುತ್ತಿದ್ದ ಆರೋಪಿಯೊಬ್ಬನನ್ನು ಪೆÇಲೀಸರು ಬಂಧಿಸಿ, ಕಂಟ್ರಿ ಪಿಸ್ತೂಲ್,ಜೀವಂತ ಗುಂಡು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಇಂಡಿತಾಲೂಕಿನ ಚಿಕ್ಕಬೇವನೂರ ಬಳಿ ನಡೆದಿದೆ.
ಚಡಚಣದ ದೇವರ ನಿಂಬರಗಿ ಗ್ರಾಮದ ಪ್ರಶಾಂತ ನಾವಿ ಬಂಧಿತ ಆರೋಪಿ.ಈತ ಇಂಡಿಯಿಂದ ಚಿಕ್ಕಬೇವನೂರ ಕಡೆಗೆಹೋಗುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ, ಪಿಎಸ್‍ಐಸೋಮೇಶ ಗೆಜ್ಜಿ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಯನ್ನುಬಂಧಿಸಿ, ಒಂದು ಕಂಟ್ರಿ ಪಿಸ್ತೂಲ್, ಏಳು ಜೀವಂತ ಗುಂಡು,ಒಂದು ಮ್ಯಾಗ್ನೆನ್ ವಶಕ್ಕೆ ಪಡೆಯಲಾಗಿದೆ.ಇಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.