ಲಕ್ಷ್ಮೇಶ್ವರ, ಏ2 : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಶನಿವಾರ ತಾಲ್ಲೂಕಿನ ಗೋವನಾಳ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಗದಗ ಮೂಲದ ಮೊಹಮ್ಮದ್‍ರಫೀಕ್ ಬಾಬುಸಾಬ್ ಮಾಳೇಕೊಪ್ಪ ಎಂಬ ವ್ಯಕ್ತಿ ಯಾವುದೇ ದಾಖಲೆ ಇಲ್ಲದೆ ತನ್ನ ಸ್ವಂತ ಕ್ಯಾಂಟರ್‍ನಲ್ಲಿ ರಾಣೇಬೆನ್ನೂರಲ್ಲಿ ಅಕ್ಕಿಲೋಡ್ ಮಾಡಿಕೊಂಡು ಲಕ್ಷ್ಮೇಶ್ವರಕ್ಕೆ ಸಾಗಾಟ ಮಾಡುತ್ತಿದ್ದಾಗ ಚೆಕ್‍ಪೋಸ್ಟ್‍ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಈತ 26 ಕೆಜಿ ತೂಕದ 180 ಅಕ್ಕಿ ಪಾಕೀಟುಗಳು ಅಂದಾಜು 1.44 ಲಕ್ಷ ರೂಪಾಯಿ ಕಿಮ್ಮತ್ತಿನ ಅಕ್ಕಿಯನ್ನು ಸಾಗಿಸುತ್ತಿದ್ದ. ಲಕ್ಷ್ಮೇಶ್ವರದ ಪೊಲೀಸರು ವಾಹನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು. ಪಿಎಸ್‍ಐ ಡಿ.ಪ್ರಕಾಶ ಪ್ರಕರಣ ದಾಖಲಿಸಿಕೊಂಡಿದ್ದಾರೆ.