ಅಕ್ರಮ ಅಕ್ಕಿ ವಶ; ಚಾಲಕ ಬಂಧನ

ಬಾದಾಮಿ, ಮಾ28: ಸರಕಾರಿ ಯೋಜನೆಯಡಿ ಪಡಿತರ ಮೂಲಕ ಉಚಿತ ವಿತರಣೆ ಮಾಡಬೇಕಾಗಿದ್ದ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ 480 ಕೆಜಿ ಅಕ್ಕಿಯನ್ನು ವಾಹನ ಚಾಲಕ ಸಮೇತ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಬೇಲೂರ ಗ್ರಾಮದ ಶ್ರೀ ಮಾರುತೇಶ್ವರ ಶಾಲೆಯ ಹತ್ತಿರ ಶನಿವಾರ ಬೆಳಿಗ್ಗೆ ಅಧಿಕಾರಿಗಳ ತಂಡ ಅಕ್ರಮ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ. ಒಟ್ಟು ರೂ.13920 ಮೌಲ್ಯದ ಅಕ್ಕಿಯನ್ನು ಮತ್ತು ರೂ.3 ಲಕ್ಷ ಮೌಲ್ಯದ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡು, ವಾಹನ ಚಾಲಕ ರೋಣ ತಾಲೂಕು ನೈನಾಪೂರ ಗ್ರಾಮದ ಯಲ್ಲಪ್ಪ ಬಸಪ್ಪ ಮುರಪುಡಿ ಚಾಲಕನನ್ನು ಬಂಧಿಸಲಾಗಿದೆ. ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ, ಪೊಲೀಸ್ ಸಿಬ್ಬಂದಿಗಳಾದ ಜಿ.ಎಸ್.ಸುನಗದ, ಎಂ.ಬಿ.ಖಾನಾಪೂರ ಹಾಜರಿದ್ದರು.