ಅಕ್ರಮ ಅಕೇಶಿಯಾ ಮರ ಸಾಗಾಟ-ವಶ

ಸುಳ್ಯ:ಸೋಣಂಗೇರಿ ಕಡೆಯಿಂದ ದೊಡ್ಡ ಲಾರಿಯಲ್ಲಿ ಸಾಗಿಸಲ್ಪಡುತ್ತಿದ್ದ ಅಕೇಶಿಯಾ ಮರದ ಲೋಡನ್ನು ಸುಳ್ಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಮರ ಸಾಗಾಟದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಈ ಮರದ ಲಾರಿಯನ್ನು ವಶಕ್ಕೆ ಪಡೆದು ಗಾಂಧಿನಗರದ ಬಳಿ ಇರುವ ವಲಯಾರಣ್ಯಾಧಿಕಾರಿಗಳ ಕಚೇರಿಯ ಎದುರು ನಿಲ್ಲಿಸಿದ್ದು, ಅಕೇಶಿಯಾ ಮತ್ತು ಮಾಂಜಿಯಂ ಮರಗಳ ಸಾಗಾಟಕ್ಕೆ ಪರ್ಮಿಟ್ ಅಗತ್ಯವಿಲ್ಲದಿರುವುದರಿಂದ, ಆ ಮರಗಳನ್ನು ಸರ್ಕಾರಿ ಜಮೀನಿನಿಂದ ಕಡಿಯಲಾಗಿದೆಯೇ ಅಥವಾ ಖಾಸಗಿ ಜಮೀನಿನಿಂದ ಕಡಿಯಲಾಗಿದೆಯೇ ಎಂದು ಪರಿಶೀಲಿಸಿ ಸರ್ಕಾರಿ ಜಮೀನಿನಿಂದ ಕಡಿಯಲಾಗಿದ್ದರೆ ತಕ್ಷೀರು ದಾಖಲಿಸುವುದಾಗಿ ಆರ್.ಎಫ್.ಒ ಗಿರೀಶ್ ತಿಳಿಸಿದ್ದಾರೆ.