ಅಕ್ರಮವಾಗಿ 3ಕೆಜಿ ಗಾಂಜಾ, 5ಲಕ್ಷ ನಗದು ಸಾಗಾಣಿಕೆ ಮಾಡುತ್ತಿದ್ದ ಇಬ್ಬರ ಬಂಧನ

ಇಂಡಿ:ಎ.2:ನಗರದಲಿ ವಿಜಯಪೂರ ಕಡೆಯಿಂದ ಹೋರ್ತಿ ಮಾರ್ಗವಾಗಿ ಇಂಡಿ ಕಡೆಗೆ ಒಂದು ಸ್ವಿಪ್ಟ್ ಕಾರದಲ್ಲಿ ಇಬ್ಬರು ಅಕ್ರಮವಾಗಿ ಗಾಂಜಾವನ್ನು ತಗೆದುಕೋಂಡು ಹೊರಟಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಶ್ರೀ ಅನುಪಮ ಅಗರವಾಲ್ ಪೊಲೀಸ ಅಧಿಕ್ಷಕರು ವಿಜಯಪೂರ ಮತ್ತು ಶ್ರೀಧರ ದೋಡ್ಡಿ ಡಿ,ವೈ,ಎಸ್,ಪಿ, ಇಂಡಿ, ಶ್ರೀ ರಾಜಶೇಖರ ಬಡದೇಸಾರ ಸಿ,ಪಿ,ಆಯ್, ಇಂಡಿ, ನೀಡಿದ ಮಾರ್ಗದರ್ಶನದಲ್ಲಿ ಶ್ರೀ ಮಾಳಪ್ಪ ಪೂಜಾರಿ ಪಿ,ಎಸ್,ಆಯ್, ಶಹರ ಪೊಲೀಸ ಠಾಣೆ ಇಂಡಿ. ಪೊಲೀಸ ಸಬ್ಬಂದಿಗಳಾದ ವ್ಹಿ,ಟಿ,ರಾಠೋಡ, ಪಿ,ಆರ್,ರಾಠೋಡ, ಬಿ,ಜಿ,ಹಡಗಲಿ, ಎ,ಎ,ಪಟ್ಟಣಶೆಟ್ಟಿ, ಸಿ,ಎಸ್,ರಾಠೋಡ, ಎಸ್,ಎಚ,ಚೌಧರಿ, ಬಿ,ಡಿ,ಚೌಧರಿ, ರವರನ್ನೋಳಗೊಂಡ ತಂಡವನ್ನು ರಚನೆ ಮಾಡಿ ಇಂಡಿ ಪಟ್ಟಣದ ಮಾಹಾವೀರ ವೃತ್ತದಲ್ಲಿ ವಾಹಾನಗಳನ್ನು ತಪಾಸಣೆ ಮಾಡುವ ಕಾಲಕ್ಕೆ ಒಣಗಿದ 3ಕೆಜಿ ಗಾಂಜಾ ಅಂದಾಜು ಕಿಮ್ಮತ್ತು 24000ರೂಗಳು ಹಾಗೂ ಕಾರಿನಲ್ಲಿ 5ಲಕ್ಷರೂಗಳು ವಶಪಡಿಸಿಕೋಂಡಿರುತಾರೆ. ಆರೊಪಿಗಳಾದ ನಿಲೇಶ ತಂ ಬೈಜುನಾಥ ಶರ್ಮಾ ವಯಾ 23ವರ್ಷ ಸಾ|| ವಿಜಯಪೂರ ನವಬಾಗ ಹಾಲಿವಸ್ತಿ ಇಂಡಿ ಕೆ,ಎಸ್,ಆರ್,ಟಿ,ಸಿ, ಡಿಪೋ ಹತ್ತೀರ. ಮಂಜುನಾಥ ತಂ ಪಾಂಡುರಂಗ ಗಿಡ್ಡೆ ವಯಾ 30ವರ್ಷ ಸಾ|| ಅರಕೇರಿ ಇವರನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಂಗ ಭಂದನಕ್ಕೆ ಒಪ್ಪಸಿರುತಾರೆ. ಪರಾರಿಯಾದ ಆರೋಪಿ ಅಮರ ಜಗತಾಪ ಸಾ|| ಕೊಂತೇನ ಬಬಲಾದಿ ಈತನ ಬಂದನಕ್ಕೆ ತಂಡವನ್ನು ರಚಿಸಲಾಗಿದೆ. ಈ ತಂಡದ ಕಾರ್ಯಚಾರಣೆಯನ್ನು ಶ್ರೀ ಅನುಪಮ ಅಗರವಾಲ್ ಪೊಲೀಸ ಅಧಿಕ್ಷಕರು ವಿಜಯಪೂರ ಅವರು ಶ್ಲಾಘಿಸಿರುತಾರೆ.