ಅಕ್ರಮವಾಗಿ ಸಾಗಿಸುತ್ತಿದ್ದ ಮುವ್ವತ್ತು ಗೋವುಗಳನ್ನು ರಕ್ಷಣೆ

ಕೆ.ಆರ್.ಪೇಟೆ: ಸೆ.19: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪಟ್ಟಣ ಠಾಣೆಯ ಪಿಎಸ್ ಐ ಬ್ಯಾಟರಾಯಗೌಡ ಭೇಧಿಸಿ ಮುವ್ವತ್ತು ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಬಿಟ್ಟಿರುವ ಘಟನೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಿ.ಬೊಪ್ಪನಹಳ್ಳಿ ಗೇಟ್ ಬಳಿ ನಡೆದಿದೆ.
ತಾಲ್ಲೂಕಿನ ಜಿ.ಬೊಪ್ಪನಹಳ್ಳಿ ಗೇಟ್ ಬಳಿ ಶನಿವಾರ ಬೆಳಗಿನ ಜಾವ 2 ಗಂಟೆಯ ವೇಳೆಯಲ್ಲಿ ಸುಮಾರು ಮುವ್ವತ್ತು ಹಸುಗಳನ್ನು ಅಕ್ರಮವಾಗಿ ಕ್ಯಾಂಟರ್ ಕಂಟೈನರ್ ಕೆ.ಎ.11 ಬಿ 4235 ವಾಹನದಲ್ಲಿ ಸಾಗಿಸುತ್ತಿದ್ದುದನ್ನು ಬೀಟ್‍ನಲ್ಲಿದ್ದ ಪಟ್ಟಣ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ ಮತ್ತು ತಂಡ ದಾಳಿÉ ಮಾಡಲಾಗಿ ಅದರಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತಿದ್ದುದು ಕಂಡುಬಂದಿದೆ.
ಕೂಡಲೇ ಆಟೋವನ್ನು ವಶಕ್ಕೆ ಪಡೆದು ಫಾರುಕ್ ಪಾಷ, ಸಿದ್ದರಾಜು, ಸಾಧಿಕ್ ಅಹಮದ್, ಬಲರಾಮ ಎಂಬ ನಾಲ್ವರನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣ ಪಟ್ಟಣ ಠಾಣೆಯಲ್ಲಿ ದಾಖಲಾಗಿರುತ್ತದೆ. ವಶಕ್ಕೆ ತೆಗೆದುಕೊಂಡ ಮುವ್ವತ್ತು ಹಸುಗಳನ್ನು ಬ್ಯಾಟರಾಯಗೌಡ ಮತ್ತು ತಂಡ ಗೋಶಾಲೆಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.