ಅಕ್ರಮವಾಗಿ ಸಾಗಾಟ ಮಾಡುತ್ತಿದ ಅಕ್ಕಿ ಮತ್ತು ಡಿಸೇಲ್ ಜಪ್ತಿ ಪ್ರಕರಣ ದಾಖಲು

ಬೀದರ, ಮಾ. 28: ಬೀದರ ಜಿಲ್ಲೆಯ ಬೀದರ ಪಟ್ಟಣ ಪ್ರದೇಶದಲ್ಲಿ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ಸರಬರಾಜಾಗುವ ಪಡಿತರ ಧಾನ್ಯ ಅನಧೀಕೃತವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸಹಾಯಕ ಆಯುಕ್ತರು ಬೀದರ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೀದರ ಪಟ್ಟಣದ ಆಹಾರ ನಿರೀಕ್ಷಕರಾದ ಶ್ರೀ.ನಾಗರಾಜ ಪಾಟೀಲ್ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೀದರ ಪಟ್ಟಣ ಹಾಗೂ ಗಾಂಧಿ ಗಂಜ ಪೊಲೀಸ್ ಠಾಣೆಯ ಅಧೀಕಾರ ಮತ್ತು ಸಿಬ್ಬಂದಿ ಜೋತೆಗೂಡಿ ಬೀದರ-ಅಮಲಾಪೂರ ರಸ್ತೆಯ ಸಿಂದೋಲ್ ಕಲ್ಯಾಣ ಮಂಟಪ ಹತ್ತಿರ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವ 199 ಕ್ವಿಂ. ಅಕ್ಕಿ ಸದರಿ ಅಕ್ಕಿಯ ಅಂದಾಜು ಮೌಲ್ಯ ರೂ.4,37,800/- ಮತ್ತು ಎರಡು ವಾಹನಗಳ ಅಂದಾಜು ಮೌಲ್ಯ ರೂ.7,00,000/- ಇದ್ದು ಜಪ್ತಿ ಮಾಡಿ 1. ಶ್ರೀ.ಮಹ್ಮದ ರಫಸಾನ್ ತಂದೆ ಮಹ್ಮದ ರಫೀಯುದಿನ್ ಮನ್ನಳ್ಳಿ 2. ಪ್ರಭೂ ತಂದೆ ನರಸಪ್ಪಾ ಯಕತಪೂರ 3. ಫೀರೋಜ್ ತಂದೆ ಜಾನಿಮೀಯ್ಯಾ ಬೀದರ 4. ಅಬ್ದುಲ್ ನಿಜಾಮ್ ತಂದೆ ಜಬ್ಬರ ಮೀಯ್ಯಾ ರವರ ವಿರುದ್ದ ಶ್ರೀ.ನಾಗರಾಜ ಪಾಟೀಲ್ ಆಹಾರ ನಿರೀಕ್ಷಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೀದರ ಪಟ್ಟಣ ಪ್ರದೇಶ ಬೀದರ ರವರ ವರದಿ ಮೇರೆಗೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಿನಾಂಕ.26-03-2023ರಂದು ತಹಸಿಲ್ದಾರರು ಚಿಟಗುಪ್ಪಾ ರವರಿಗೆ ಯಾವುದೇ ದಾಖಲೆಗಳು ಇಲ್ಲದೆ ಅನಧಿಕೃತವಾಗಿ ಡಿಸೇಲ್ ಸಾಗಾಣಿಕೆ ಮಾಡುತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಚಿಟಗುಪ್ಪಾ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಚಿಂಚೋಳಿ ರಸ್ತೆಯ ಬದಿಯ ಮೇಲೆ ಎರಡು ಟ್ಯಾಂಕರಗಳಲ್ಲಿ ಒಟ್ಟು 24000 ಲಿಟರ್ ಡಿಸೇಲ್ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತೆಲಂಗಾಣ ರಾಜ್ಯಕ್ಕೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶ್ರೀ.ರವೀಂದ್ರ ದಾಮಾ ತಹಸಿಲ್ದಾರರು ಚಿಟಗುಪ್ಪಾ ಹಾಗೂ ಆಹಾರ ಶಿರಸ್ತೆದಾರರು ಶ್ರೀ.ಪರಮೇಶ್ವರ ಹಾಗೂ ಆಹಾರ ನಿರೀಕ್ಷಕರು ಶ್ರೀ.ಶೇಖರ್ ಮತ್ತು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜಂಟಿಯಾಗಿ ದಾಳಿ ನಡೆಸಿ ಎರಡು ಟ್ಯಾಂಕರ್‍ಗಳಲ್ಲಿ ಅನಧಿಕೃತವಾಗಿ ಸಾಗಾಣಿಕೆಯಾಗುತ್ತಿದ್ದ ಒಟ್ಟು 24000 ಲೀಟರ್ ಡಿಸೇಲ್ ಅಂದಾಜು ಮೌಲ್ಯ ರೂ.21,20,400/- ಮತ್ತು ಎರಡು ಟ್ಯಾಂಕರ್ ವಾಹನಗಳ ಅಂದಾಜು ಮೌಲ್ಯ ರೂ.29,00,000/- ಜಪ್ತಿ ಮಾಡಿ,1. ಶ್ರೀ.ನಾಗರಾಜ ತಂದೆ ಯಾದಯ್ಯಾ ಓದೂಗುಂಡಂ 2. ಹರಿಶ್ರೇದ್ಯಾ ತಂದೆ ವೆಂಕಟರೆಡ್ಡಿ ಅಮಗಲ್ 3. ಹಣಮಂತರೆಡ್ಡಿ ತಂದೆ ಸುರೇಂದ್ರ ರೆಡ್ಡಿ ಹೈದ್ರಾಬಾದ 4.ಯಾದಗೀರಿರಾವ ತಂದೆ ಜನಾಧಾರರಾವ ಹೂದ್ರಾಬಾದ 5. ಪ್ರಭು ತಂದೆ ಬಸವರಾಜ ಕರಕನ್ನಳ್ಳಿ ರವರ ವಿರುದ್ದ ಶ್ರೀ.ರವೀಂದ್ರ ದಾಮಾ ತಹಸಿಲ್ದಾರರು ಚಿಟಗುಪ್ಪಾ ರವರ ವರದಿಯ ಆಧಾರದ ಮೇರೆಗೆ ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಾರ್ಯಲಯ ಪ್ರಕಟಣೆಯಲ್ಲಿ ತಿಳಿಸಿದೆ.