ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮ್ಯಾಂಗನೀಸ್ ಮಿಶ್ರಿತ ಮಣ್ಣು ವಶಕ್ಕೆ ಪಡೆದ ಅಧಿಕಾರಿಗಳು

ಜಗಳೂರು.ಮೇ.೬;  ತಾಲ್ಲೂಕಿನ  ಜಮಾಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮ್ಯಾಂಗನೀಸ್ ಮಿಶ್ರಿತ ಮಣ್ಣನ್ನು ಅರಣ್ಯಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ತಮ್ಮ ವಶಪಡಿಸಿ ಕೊಂಡಿದ್ದಾರೆ ಕೆಲ ದಿನಗಳಿಂದ ಅರಣ್ಯ ಇಲಾಖೆ ಕಣ್ಣು ತಪ್ಪಿಸಿ ಗಣಿಗಾರಿಕೆ ಮಾಡುತ್ತಿದ್ದರು ಅದಲ್ಲದೆ ಅಲ್ಲಿದ್ದ ನೂರಾರು ಲೋಡ್  ಮ್ಯಾಂಗನೀಸ್ ಮಣ್ಣನು ಜಗಳೂರು ಪಟ್ಟಣದ ಹೊರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆಯ ಆರ್.ಎಫ್.ಓ ಮತ್ತು ಅರಣ್ಯ ಸಿಬ್ಬಂದಿಗಳು ಖುದ್ದಾಗಿ ಸ್ಥಳದಲ್ಲಿದ್ದು 2 ಟಿಪ್ಪರ್ ದೊಡ್ಡ ಲಾರಿಗಳು ಮತ್ತು 4ಟ್ಯಾಕ್ಟರ್ ಗಳಿಂದ ಮಣ್ಣನ್ನು ಎತ್ತುವಳಿ ಮಾಡಿ ಸಾಲುಮರದ ತಿಮ್ಮಕ್ಕ ಪಾರ್ಕಿನಲ್ಲಿ ಶೇಖರಣೆ ಮಾಡಿಕೊಂಡಿದ್ದಾರೆ ಈ ಸಂಬಂಧ ಜಮಾಪುರ ಗುಡ್ಡದ ಹೊರವಲಯದಲ್ಲಿ ಹಳ್ಳದಲ್ಲಿ ಅದಿರು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಡಿ.ಎಫ್.ಓ ಜಗನ್ನಾಥ್.ಎ.ಸಿ.ಎಫ್.ಮೋಹನ್.ಆರ್.ಎಫ್.ಓ ಪ್ರಕಾಶ್ ನೇತೃತ್ವದ ತಂಡ  ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿದ್ದ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ಜಪ್ತಿ ಮಾಡುವಂತೆ ಸೂಚಿಸಿದ್ದರು ಅದರಂತೆ  ಅರಣ್ಯ ಇಲಾಖೆ ಆರ್.ಎಫ್.ಓ ಪ್ರಕಾಶ್ ಮತ್ತು ಅವರ ಸಿಬ್ಬಂದಿ ತಂಡದೊಂದಿಗೆ ಅಲ್ಲಿದ್ದ ಮ್ಯಾಂಗನೀಸ್ ಮಿಶ್ರಿತ ಮಣ್ಣನ್ನು ತಮ್ಮ ಇಲಾಖೆಯ ವಶಕ್ಕೆ ಪಡೆದುಕೊಂಡಿದ್ದಾರೆ .ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ಈ ಭಾಗದ ರೈತರಲ್ಲಿ ಆತಂಕ ಉಂಟುಮಾಡಿತು ಇದರ ವಿರುದ್ಧ ಊರಿನ ಗ್ರಾಮಸ್ಥರಾದ ಬಾಲರಾಜ್ ಮತ್ತು ಕೆಲವು ಮುಖಂಡರು  ಹೋರಾಟ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದರು. ಆದರೆ ಅಧಿಕಾರಿಗಳು ಇನ್ನು ಮುಂದೆ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ಕೊಟ್ಟಿದ್ದು ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ದಾಸ್ತಾನು ಮಾಡಿದ್ದ ಮಣ್ಣನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ಅಲ್ಲಿನ ರೈತರ ಮುಖದಲ್ಲಿ ಮಂದಹಾಸ ಮೂಡಿದೆ