ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ

ವಿಜಯಪುರ,ಮಾ.6-ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೆÇಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.
ಮುಬಾರಕ್ ಬಾಗವಾನ್, ಚಂದ್ರಶೇಖರ ಯಡಹಳ್ಳಿ, ಯಲ್ಲಾಲಿಂಗ ಹಡಪದ, ಹಣಮಂತ ತಳಕೇರಿ ಎಂಬುವವರನ್ನು ಬಂಧಿಸಿ 29,040 ರೂಪಾಯಿ ಮೌಲ್ಯದ ಮಾವಾ ಜಪ್ತಿಗೈದಿದ್ದಾರೆ.
ಈ ಸಂಬಂಧ ದೇವರಹಿಪ್ಪರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.