ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

ಕಲಬುರಗಿ,ಜು.28-ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವ ವಿದ್ಯಾರ್ಥಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಳಗಿ ತಾಲ್ಲೂಕಿನ ರುಮ್ಮನಗುಡ ತಾಂಡಾದ ಸುನೀಲ ದೇವಿದಾಸ ರಾಠೋಡ್ (22) ಮತ್ತು ವಿದ್ಯಾರ್ಥಿ ಕರಣ್ ನೀಲಕಂಠ ಜಾಧವ್ (17) ಎಂಬುವವರನ್ನು ಬಂಧಿಸಿ 8,100 ರೂ.ಮೌಲ್ಯದ 540 ಗ್ರಾಂ.ಗಾಂಜಾ, 30 ಸಾವಿರ ರೂ.ನಗದು, 1 ಲಕ್ಷ ರೂ.ಮೌಲ್ಯದ ಮಾರುತಿ ಶಿಫ್ಟ್ ಡಿಸೈರ್ ಕಾರು ಜಪ್ತಿ ಮಾಡಿದ್ದಾರೆ.
ಎಸ್ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಗ್ರಾಮೀಣ ಡಿ.ಎಸ್.ಪಿ.ಶೀಲವಂತ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಮಂತ ಇಲ್ಲಾಳ್, ಕಮಲಾಪುರ ಪಿ.ಎಸ್.ಐ ಶಿವಶಂಕರ ಸುಬೇದಾರ, ಮಹಾಗಾಂವ ಪಿ.ಎಸ್.ಐ ಹುಸೇನ್ ಬಾಷಾ, ಸಿಬ್ಬಂದಿಗಳಾದ ರಾಜಶೇಖರ್ ಮತ್ತು ಅಶೋಕ ಅವರು ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೂಂಯ್ಯಾರ್ ಕ್ರಾಸ್ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ಅನುಸಾರ ಕಾನೂನು ಕ್ರಮ ಜರುಗಿಸಲಾಗಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.