ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಾಹನ ಪೊಲೀಸ್ ಅಧಿಕಾರಿಗಳ ವಶಕ್ಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಅಡ್ಡ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ವಾಹನವನ್ನು ವಶಪಡಿಸಿಕೊಂಡಿದ್ದರೆ.
ತಾಲ್ಲೂಕಿನ ಈ ಭಾಗದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ಅನೇಕ ಬಾರಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ವ್ಯಾಪಕವಾಗಿ ಅಕ್ರಮ ಸಾಗಾಣಿಕೆ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಈ ಹಿನ್ನೆಲೆಯಾಗಿ
ಕೆ‌ಎ.06 ಟಿಬಿ 4337 ಸಂಖೆಯ ಸ್ವರಾಜ್ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ್ ವಾಹನ ಮತ್ತು ಅಕ್ರಮ ಮರಳು ತುಂಬಿದ ಟ್ರಾಲಿಯನ್ನು ಖಚಿತ ಮಾಹಿತಿ ಯಿಂದ ಮರಳು ತುಂಬಿದ ಟ್ರಾಕ್ಟರ್ ವಶಕ್ಕೆ ಪಡೆದು ಕ್ರಮ ಕೈಗೊಳ್ಳುತ್ತಿದ್ದಾರೆ
 ಈ ಕಾರ್ಯಾಚರಣೆಯಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ವೀರನಗೌಡ, ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಚಿನ್ನಪ್ಪ ಇದ್ದರು.