ಅಕ್ರಮವಾಗಿ ಮರಳು ದಂದೆ ಕ್ರಮಕ್ಕೆ ಒತ್ತಾಯ

ರಾಯಚೂರು, ನ.೧೪- ಸರಕಾರ ಗೈರಾಣಿ ಭೂಮಿಯಲ್ಲಿ ಅಕ್ರಮವಾಗಿ ಮರಳು ದಂದೆ ಮಾಡುತ್ತಿರುವ ಅಯಣ್ಣ ಅಲಿಯಾಸ್ ಭೀಮಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಭೂಮಿ ವಸತಿ ಹೋರಾಟ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ವಡವಟ್ಟಿ ಸೀಮಾಂತರದಲ್ಲಿ ಬರುವ ಸರ್ವೆ ನಂ ೯೯,೧ ವಿಸ್ತೀರ್ಣ ೧ ಎಕರೆ ೨೪ ಗುಂಟೆ ಸರಕಾರಿ ಭೂಮಿಯಲ್ಲಿ ಮರಳು ದಂದೆ ಮಾಡುತ್ತಿರುವ ಗ್ರಾಮದ ನಿವಾಸಿ ಅಯ್ಯಣ್ಣ ತಂದೆ ಭೀಮಣ್ಣ ಎಂಬ ವ್ಯಕ್ತಿ ಅನೇಕ ವರ್ಷಗಳಿಂದ ನಿರಂತರವಾಗಿ ಮರಳು ದಂದೆ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಸುಮಾರು ೪ ವಿದ್ಯುತ್ ಕಂಬಳ ಅಂತರ ಮಣ್ಣನ್ನು ಅಗೆದು ಟಿಪ್ಪರ್ ಮುಖಾಂತರ ಹಳ್ಳಿಗೆ ಬರುವ ಸಣ್ಣ ದಾರಿಯಲ್ಲಿ ಟಿಪ್ಪರ್ ಗಳು ಓಡಾಡಿ ರಸ್ತೆ ಹದಗಟ್ಟಿದೆ ಆಕ್ರೋಶ ವ್ಯಕ್ತಪಡಿಸಿದರು. ಸುತ್ತಮುತ್ತಲಿನ ಜಮೀನುಗಳಿಗೆ ದೂಳು ಹೋಗಿ ಬೆಳೆಗಳು ನಾಶಗೊಂಡಿವೆ ಎಂದು ಆಕ್ರೋಶ ಹೊರಹಾಕಿದರು.
ಗ್ರಾಮದ ಸರಕಾರಿ ಶಾಲೆ ಮುಖ್ಯ ರಸ್ತೆಯಲ್ಲಿ ಓಡಾಡುವುದರಿಂದ ಶಾಲೆಯ ಮಕ್ಕಳಿಗೆ ಧೂಳು ಅವರಿಸಿಕೊಂಡು ಮಕ್ಕಳಿಗೆ ಉಸಿರಾಡಲು ತುಂಬಾ ತೊಂದರೆಯಾಗಿರುತ್ತದೆ ಎಂದು ದೂರಿದರು. ಅನೇಕ ವರ್ಷಗಳಿಂದ ಮರಳು ದಂದೆ ನಡೆಯುತ್ತಿದ್ದರು. ಸ್ಥಳೀಯ ಮಟ್ಟದ ಅಧಿಕಾರಿಗಳು ಮೌನವಾಗಿದ್ದರೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಜಿನಯ್ಯ ಕುರುಬದೊಡ್ಡಿ, ಗೋವಿಂದಾಸ್, ಶ್ರೀನಿವಾಸ್ ಕೊಪ್ಪರ, ಮಾರೆಪ್ಪ, ನರಸಿಂಹಲು, ತಿಮ್ಮಪ್ಪ ಸೇರಿದಂತೆ ಉಪಸ್ಥಿತರಿದ್ದರು.